ದೇಶ

ಇ-ಕಚೇರಿ ಜಾರಿಗೆ ತನ್ನಿ; ಪ್ರಧಾನ ಮಂತ್ರಿಗಳಿಂದ ಪ್ರಶಸ್ತಿ ಪಡೆಯಿರಿ: ಇಲಾಖೆಗಳಿಗೆ ಸರ್ಕಾರ ಆದೇಶ

Sumana Upadhyaya

ನವದೆಹಲಿ: ಕಾಗದರಹಿತ ಇ-ಕಚೇರಿ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೆ ತರುವ ಕೇಂದ್ರ ಸರ್ಕಾರ ಸಚಿವಾಲಯ ಮತ್ತು ಇಲಾಖೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.ಸರ್ಕಾರಿ ಕಚೇರಿ ಕೆಲಸಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಆಡಳಿತಕ್ಕೆ ಚುರುಕು ಮುಟ್ಟಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಕಾಲಾವಧಿ ಮಿತಿಯೊಳಗೆ ಕಾಗದರಹಿತ ಆಡಳಿತ ಕಾರ್ಯವೈಖರಿಯನ್ನು ಜಾರಿಗೆ ತರಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ಸಚಿವರುಗಳಿಗೆ ಪ್ರಧಾನ ಮಂತ್ರಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಪತ್ರ ಬರೆದಿದ್ದಾರೆ.

''ಇದು ಸರ್ಕಾರದ ಆದ್ಯ ಕೆಲಸಗಳಲ್ಲಿ ಒಂದು. ಎಲ್ಲಾ ಸಚಿವರುಗಳು ತಮ್ಮ ಇಲಾಖೆಯಲ್ಲಿ ಕಾಗದರಹಿತ ಕಚೇರಿ ಕೆಲಸ ನಿಯಮಗಳನ್ನು ಜಾರಿಗೆ ತರಬೇಕೆಂದು ನಾವು ಒತ್ತಾಯಿಸುತ್ತೇವೆ. ಇ-ಕಚೇರಿ ಇಲಾಖೆಗಳ ಕೆಲಸವನ್ನು ವೇಗವಾಗಿ ಮುಗಿಸಲು ಸಹಾಯ ಮಾಡುವುದಲ್ಲದೆ, ಸರ್ಕಾರದ ಬೊಕ್ಕಸದ ಹಣ ಉಳಿತಾಯ ಮಾಡುತ್ತದೆ'' ಎಂದು ಜಿತೇಂದ್ರ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸರ್ಕಾರದ ಈ ಆದೇಶವನ್ನು ಸರಿಯಾಗಿ ಪಾಲಿಸಿ ಉತ್ತಮ ಕೆಲಸ ನಿರ್ವಹಿಸಿದ ಸಾರ್ವಜನಿಕ ಇಲಾಖೆಗಳಿಗೆ ನಾಗರಿಕ ಸೇವಾ ದಿನದಂದು ಪ್ರಧಾನ ಮಂತ್ರಿ ಪ್ರಶಸ್ತಿ ನೀಡಲಿದ್ದಾರೆ, ಆಡಳಿತಾತ್ಮಕ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ಇ-ಕಚೇರಿ ಅಭಿಯಾನವನ್ನು ಜಾರಿಗೆ ತರಲು ಹಣಕಾಸು ನೆರವು ಒದಗಿಸುತ್ತದೆ ಎಂದು ಹೇಳಿದರು.

SCROLL FOR NEXT