ನವದೆಹಲಿ: ಟಿಬೆಟ್ ಗೆ ಭೇಟಿ ನೀಡಿ ಎಂದು ಚೀನಾದ ಥಿಂಕ್ ಟ್ಯಾಂಕ್ ನನ್ನನ್ನು ಆಹ್ವಾನಿಸಿದೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.
ಚೀನಾದ ಥಿಂಕ್ ಟ್ಯಾಂಕ್ ನನಗೆ ಟಿಬೆಟ್ ಗೆ ಆಹ್ವಾನಿಸಿದ್ದು, ಚೀನಾ ಸರ್ಕಾರದ ಅಧಿಕಾರಿಗಳನ್ನೂ ಭೇಟಿಯಾಗಿ ಮಾತುಕತೆ ನಡೆಸಿ ಎಂದು ಥಿಂಕ್ ಟ್ಯಾಂಕ್ ಹೇಳಿದೆ ಎಂದು ಅವರು ತಿಳಿಸಿದ್ದಾರೆ.
ಚೀನಾ ವಿದೇಶಾಂಗ ಸಚಿವಾಲಯ ಥಿಂಕ್ ಟ್ಯಾಂಕ್ ಸ್ವಾಮಿ ಅವರನ್ನು ಟಿಬೆಟ್ ಗೆ ಭೇಟಿ ನೀಡಲು ಆಹ್ವಾನಿಸಿದೆ. ಸ್ವಾಮಿ ಅವರು ವಿದೇಶಾಂಗ ಇನ್ಸಿಟಿಟ್ಯೂಟ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಸ್ವಾಮಿ ಕಚೇರಿ ಪ್ರಕರಣ ಹೊರಡಿಸಿದೆ. ಚೀನಾ ಸರ್ಕಾರದ ಅತಿಥಿಯಾಗಿ ಸುಬ್ರಮಣಿಯನ್ ಸ್ವಾಮಿ ಅವರನ್ನು ಕೈಲಾಸ ಮಾನಸಸೋರವರಕ್ಕೆ ಕರೆದೊಯ್ಯಲಾಗುವುದು ಎಂದು ಹೇಳಲಾಗಿದೆ.