ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ತಮಿಳುನಾಡು ಚುನಾವಣೆ: ಮಧ್ಯಾಹ್ನ 3 ಗಂಟೆಯವರೆಗೆ ಶೇ.63.7ರಷ್ಟು ಮತದಾನ

ತೀವ್ರ ಕುತೂಹಲ ಕೆರಳಿಸಿರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಸೋಮವಾರ ಬಿರುಸಿನಿಂದ ಸಾಗಿದ್ದು,...

ಮತದಾನ ಮಾಡುತ್ತಿರುವ ನಟ ರಜನಿಕಾಂತ್
Lingaraj Badiger
Updated On : 16 May 2016, 4:26 am
ಚೆನ್ನೈ: ತೀವ್ರ ಕುತೂಹಲ ಕೆರಳಿಸಿರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಸೋಮವಾರ ಬಿರುಸಿನಿಂದ ಸಾಗಿದ್ದು, ತಮಿಳುನಾಡಿನಲ್ಲಿ ಮಧ್ಯಾಹ್ನ ಮೂರು ಗಂಟೆಯವರೆಗೆ ಶೇ.63.7ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸರತಿ ಸಾಲಲ್ಲಿ ನಿಂತು ಮತದಾರರು ಮತದಾನ ಮಾಡುತ್ತಿದ್ದಾರೆ. ಇನ್ನು ತಮಿಳುನಾಡಿನಾದ್ಯಂತ ಬೆಳಗ್ಗೆ ಸುರಿದ  ಭಾರಿ ಮಳೆ ಮತದಾನಕ್ಕೆ ಅಡ್ಡಿ ಪಡಿಸಿತ್ತು. ಆದರೂ ಕೊಡೆ ಹಿಡಿದೇ ಮತದಾನಕ್ಕೆ ಆಗಮಿಸಿದ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ದಕ್ಷಿಣ ತಮಿಳುನಾಡು ಭಾಗಗಳಲ್ಲಿ ಇಂದು ಮಳೆ  ಸುರಿದಿದ್ದು, ಮಧುರೈ, ತಂಜಾವೂರು ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ಮಳೆಯ ನಡುವೆಯೇ ಈ ಜಿಲ್ಲೆಗಳಲ್ಲಿ 11 ಗಂಟೆಯ ವೇಳೆಗೆ ಶೇ.9ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ  ತಿಳಿಸಿದೆ.
ಒಟ್ಟು 234 ಕ್ಷೇತ್ರಗಳ ಪೈಕಿ ಇಂದು 232 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಸುಮಾರು 5.82 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಉಳಿದ ಎರಡು ಕ್ಷೇತ್ರಗಳಾದ ತಂಜಾವೂರು ಮತ್ತು ಅರವಕುರಿಚ್ಚಿ ಕ್ಷೇತ್ರಗಳಿಗೆ ಮೇ 23ರಂದು ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಮತದಾರರಿಗೆ ವ್ಯಾಪಕವಾಗಿ ಹಣ ಹಂಚಲಾಗಿದೆ ಎಂಬ ಮಾಹಿತಿ ಮೇರೆಗೆ  ಚುನಾವಣಾ ಆಯೋಗ ಮತದಾನ ಪ್ರಕ್ರಿಯೆಯನ್ನು ಮುಂದೂಡಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement