ದೇಶ

ಮೋದಿಯವರ ಇರಾನ್ ಭೇಟಿ; ತೈಲ ಆಮದು ದುಪ್ಪಟ್ಟಾಗುವ, ಚಬಹರ್ ಬಂದರು ಒಪ್ಪಂದ ನಿರೀಕ್ಷೆ

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ 22 ಮತ್ತು 23ರಂದು ಎರಡು ದಿನಗಳ ಇರಾನ್ ಪ್ರವಾಸ ಕೈಗೊಳ್ಳಲಿದ್ದು, ಇಂಧನ ಸಮೃದ್ಧ ರಾಷ್ಟ್ರದೊಂದಿಗೆ ನಿರ್ಬಂಧವಿಲ್ಲದೆ ಸಂಬಂಧ ಮುಂದುವರಿಸಲು ಅನುಕೂಲವಾಗಲಿದೆ ಎಂದು ಭಾರತ ನಿರೀಕ್ಷಿಸಿದೆ.

ಪ್ರಧಾನಿಯವರ ಭೇಟಿಯಿಂದ ಗಲ್ಫ್ ರಾಷ್ಟ್ರದಿಂದ ಎರಡು ಪಟ್ಟು ಹೆಚ್ಚು ತೈಲ ಆಮದು ಮಾಡಿಕೊಳ್ಳಲು ಭಾರತ ನಿರೀಕ್ಷಿಸುತ್ತಿದ್ದು, ಅನಿಲ ನಿಕ್ಷೇಪವನ್ನು ಬಲಪಡಿಸುವ ಯೋಜನೆಯಲ್ಲಿದೆ.ಇರಾನ್ ನ ದಕ್ಷಿಣ ಪ್ರಾಂತ್ಯದಲ್ಲಿರುವ ಚಬಹರ್ ಬಂದರನ್ನು ಅಭಿವೃದ್ಧಿಪಡಿಸುವ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ.

ಇರಾನ್ ಅಧ್ಯಕ್ಷ ಡಾ. ಹಸ್ಸನ್ ರೌಹಾನಿ ಅವರ ಆಹ್ವಾನದ ಮೇರೆಗೆ ಮೋದಿಯವರು ಇರಾನ್ ಗೆ ಅಧಿಕೃತ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.ಭಾರತ ಮತ್ತು ಇರಾನ್ ದೀರ್ಘಕಾಲದ ನಾಗರಿಕ ಸಂಬಂಧವನ್ನು ಹಂಚಿಕೊಂಡಿದೆ.

SCROLL FOR NEXT