ಮಹಾತ್ಮ ಗಾಂಧಿ ಕಾನುಭಾಯಿ 
ದೇಶ

ಮಹಾತ್ಮ ಗಾಂಧಿ ಮೊಮ್ಮಗನ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಹತ್ಮಾಗಾಂಧಿ ಮೊಮ್ಮಗನ ಜತೆ ದೂರವಾಣಿ ಕರೆ ಮಾಡಿ ಮಾತನಾಡುವ ಮೂಲಕ ದೇಶದ ಜನರ ಮೆಚ್ಚುಗೆ ಪಡೆದಿದ್ದಾರೆ. ..

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಹತ್ಮಾಗಾಂಧಿ ಮೊಮ್ಮಗನ ಜತೆ ದೂರವಾಣಿ ಕರೆ ಮಾಡಿ ಮಾತನಾಡುವ ಮೂಲಕ ದೇಶದ ಜನರ ಮೆಚ್ಚುಗೆ ಪಡೆದಿದ್ದಾರೆ.
ದೆಹಲಿಯ ವೃದ್ಧಾಶ್ರಮದಲ್ಲಿ ವಾಸಿಸುತ್ತಿರುವ ಮಹತ್ಮಾಗಾಂಧಿ ಮೊಮ್ಮಗ ಕಾನುಭಾಯಿ ಗಾಂಧಿ ಜತೆ ಪ್ರಧಾನಿ ದೂರವಾಣಿ ಕರೆ ಮಾಡಿದರು. ಗುಜರಾತಿ ಭಾಷೆಯಲ್ಲಿಯೇ ಇಬ್ಬರು ಬಹಳ ಹೊತ್ತು ಮಾತನಾಡಿ, ಉಭಯ ಕುಶಲೋಪರಿ ವಿಚಾರಿಸಿದರು ಎಂದು ಪ್ರಧಾನಿ ಕಚೇರಿ ಟ್ವೀಟ್‌ ಮಾಡುವ ಮೂಲಕ ವಿಚಾರ ಬಹಿರಂಗ ಪಡಿಸಿದೆ.

ಕಾನುಭಾಯಿ ದಂಪತಿ ಜತೆ ಮಾತನಾಡಿದ ಬಳಿಕ ಪ್ರಧಾನಿ  ಅವರು ತಂಗಿರುವ ವೃದ್ಧಾಶ್ರಮದಲ್ಲಿ ವಯೋವೃದ್ಧ ದಂಪತಿಗಳಿಗೆ ಯಾವುದೇ ಕುಂದುಕೊರತೆ ಆಗದಂತೆ ಸಕಲ ವ್ಯವಸ್ಥೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾತ್ಮಗಾಂಧಿ ಮೊಮ್ಮಗ ಕಾನುಭಾಯಿ ( 87) ಹಾಗೂ ಪತ್ನಿ ಡಾ. ಶಿವಲಕ್ಷ್ಮಿ ದೆಹಲಿಯ ಗುರುವಿಶ್ರಾಮ ವೃದ್ಧಾಶ್ರಮದಲ್ಲಿ ಮೇ 8ರಿಂದ ವಾಸಿಸುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲೂ ದಂಪತಿ ದೇಶಕ್ಕೆ ಸೇವೆ ಸಲ್ಲಿಸುವ ತುಡಿತ ಹೊಂದಿದ್ದಾರೆ.

ನಾನೊಬ್ಬ ಸೇವಕ. ದೇಶಕ್ಕೆ ಸೇವೆ ಮಾಡಲು ಬಯಸುತ್ತೇನೆ. ಇತರ ಭಾರತೀಯರಿಂದ ಯಾವುದೇ ನೆರವು ಬಯಸುವುದಿಲ್ಲ. ದೇಶ ಯಾವ ರೀತಿಯ ಸೇವೆ ಬಯಸುತ್ತದೆಯೋ ದೇಶಕ್ಕಾಗಿ ಸೇವೆ ನೀಡಲು ಬಯಸುತ್ತೇನೆ ಎಂದು ಪ್ರಧಾನಿ ಬಳಿ ಕಾನುಭಾಯಿ ಹೇಳಿದ್ದಾರೆ.
ಅಮೆರಿಕದಲ್ಲಿ ನಾಲ್ಕು ದಶಕಗಳ ಕಾಲ ಕೆಲಸ ಮಾಡಿದ ಈ ದಂಪತಿ, 2014ರಲ್ಲಿ ಭಾರತಕ್ಕೆ ವಾಪಸ್‌ ಆಗಿ, ಗುಜರಾತ್‌ನ ವಿವಿಧ ಆಶ್ರಮಗಳಲ್ಲಿ ಒಂದೂವರೆ ವರ್ಷಗಳ ಕಾಲ ತಂಗಿದ್ದರು. ಇದೀಗ ದೆಹಲಿಯಲ್ಲಿ 130 ವರ್ಷ ಹಳೆಯದಾದ ವೃದ್ಧಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ