ಕೊಚ್ಚಿ: ಕೇರಳ ವಿಧಾನಸಭೆ ಚುನಾವಣೆ ಹೊರಬಿಳುತ್ತಿದ್ದಂತೆ ಸಂಭ್ರಮಾಚರಣೆಗಾಗಿ ಬೀದಿಗಿಳಿದ ಸಿಪಿಎಂ, ಬಿಜೆಪಿ ಹಾಗೂ ಐಯುಎಂಎಲ್ ಕಾರ್ಯಕರ್ತರ ಮಧ್ಯ ಘರ್ಷಣೆ ಸಂಭವಿಸಿದ್ದು, ಈ ವೇಳೆ ದುಷ್ಕರ್ಮಿಯೊಬ್ಬ ಕಚ್ಚಾ ಬಾಂಬ್ ಎಸೆದಿದ್ದು, ಘಟನೆಯಲ್ಲಿ ಓರ್ವ ಸಿಪಿಎಂ ಕಾರ್ಯಕರ್ತ ಮೃತಪಟ್ಟಿದ್ದಾರೆ.
ಧರ್ಮದೊಂ ಕ್ಷೇತ್ರದ ಪಿನಾರಯಿಯಲ್ಲಿ ಈ ಘಟನೆ ನಡೆದಿದ್ದು, ಸಿಪಿಎಂ ಕಾರ್ಯಕರ್ತ ಮೃತಪಟ್ಟಿದ್ದು ಬಾಂಬ್ ದಾಳಿಯಿಂದಲ್ಲ. ಬದಲಾಗಿ ಬಾಂಬ್ ಎಸೆತದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಓಡುತ್ತಿದ್ದ ಸಂದರ್ಭದಲ್ಲಿ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
140 ಸದಸ್ಯ ಬಲವನ್ನು ಹೊಂದಿರುವ ಕೇರಳ ವಿಧಾನಸಭೆಯಲ್ಲಿ ಎಲ್ ಡಿಎಫ್ 90 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.