ತಿರುವನಂತಪುರಮ್: ಕೇರಳದಲ್ಲಿ ಬಿಜೆಪಿ ಪಕ್ಷ ತನ್ನ ಖಾತೆಯನ್ನು ತೆರೆಯಲು ಕಾರಣರಾಗಿರುವ ಬಿಜೆಪಿ ನಾಯಕ ರಾಜಗೋಪಾಲ್ ತಮ್ಮ ಗೆಲುವಿನ ಬಗ್ಗೆ ಮಾಧ್ಯಮಗಳಿಗೆ ಪ್ರರಿಕ್ರಿಯೆ ನೀಡಿದ್ದು, ತಮ್ಮ ಗೆಲುವು ಕೇರಳದಲ್ಲಿ ಬಿಜೆಪಿ ಉದಯವಾಗುತ್ತಿರುವ ಸಂಕೇತ ಎಂದು ಹೇಳಿದ್ದಾರೆ.
ಕಾಂಗ್ರೆಸ್, ಸಿಪಿಐ(ಎಂ) ಸೇರಿದಂತೆ ಎಲ್ಲರೂ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುವುದಿಲ್ಲ, ಬಿಜೆಪಿ ವಿಧಾನಸಭೆಯನ್ನು ಪ್ರವೇಶಿಸಬೇಕೆಂದರೆ ಅತಿಥಿಗಳ ಪಾಸ್ ಪಡೆದು ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತುಕೊಳ್ಳಬೇಕು ಎಂದು ಟೀಕಿಸಿದ್ದರು, ಆದರೆ ಈಗ ಬಿಜೆಪಿ ಒಂದು ಸ್ಥಾನ ಗೆಲ್ಲುವ ಮೂಲಕ ಕೇರಳ ವಿಧಾನಸಭೆಗೆ ಪ್ರವೇಶಿಸುತ್ತಿದೆ ಎಂದು ಒ.ರಾಜಗೋಪಾಲ್ ತಿಳಿಸಿದ್ದಾರೆ.
ಬಿಜೆಪಿ ಗೆಲುವಿನ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ರಾಜಶೇಖರನ್," ಬಿಜೆಪಿ ಕಾರ್ಯಕರ್ತರ ಶ್ರಮ ಹಾಗೂ ಬಲಿದಾನಗಳಿಂದ ಬಿಜೆಪಿ ಕೇರಳ ವಿಧಾನಸಭೆಯನ್ನು ಪ್ರವೇಶಿಸುತ್ತಿದೆ ಎಂದು ಹೇಳಿದ್ದಾರೆ.