ನವದೆಹಲಿ: ದೇಶದಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾವಂತ ದಂಪತಿಗಳೇ ಹೆಚ್ಚಾಗಿ ವಿಚ್ಛೇದನ ಪಡೆಯುತ್ತಿರುವುದು ವಿಷಾಧನೀಯ. ಇದಕ್ಕೆ ಅಂತ್ಯವಾಡಲು ದಂಪತಿಗಳು ಪ್ರಯತ್ನಿಸಬೇಕು. ಇಬ್ಬರು ಸೌಹಾರ್ದತೆಯಿಂದ ಇರಲು ಪ್ರಯತ್ನಿಸಿ ಎಂದು ಸುಪ್ರೀಂಕೋರ್ಟ್ ವಿಚ್ಛೇದನ ಪಡೆಯುವ ದಂಪತಿಗಳಿಗೆ ಕಿವಿ ಮಾತು ಹೇಳಿದೆ.
ನ್ಯಾಯಾಮೂರ್ತಿ ಎ ಎಂ ಸಪ್ರೆ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಾಪೀಠ ವಿಚ್ಛೇದನ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ವೇಳೆ ದಂಪತಿಗಳಿಗೆ ಕಿವಿ ಮಾತು ಹೇಳಿದೆ. ವಿದ್ಯಾವಂತರೇ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುವುದು ಎಷ್ಟು ಸರಿ? ಇಬ್ಬರು ಜೊತೆಯಲ್ಲಿ ಕುಳಿತು ಮಾತಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದೆ.
ನೀವಿಬ್ಬರು ದಂಪತಿಗಳು ಒಟ್ಟಾಗಿರುವುದನ್ನು ನೋಡಲು ನಮಗೆ ಖುಷಿಯಾಗುತ್ತದೆ. ವಿದ್ಯಾವಂತರಾದ ನೀವೇ ಸಣ್ಣಪುಟ್ಟ ಜಗಳಗಳಿಗೆ ವಿಚ್ಛೇದನ ಪಡೆಯಲು ಮುಂದಾಗುವುದು ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ವೈವಾಹಿಕ ಜೀವನದಲ್ಲಿ ಎದುರಾದ ಸಮಸ್ಯೆಗಳಿಂದ ದಂಪತಿಗಳಿಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಲಯ ಸಣ್ಣ ಪುಟ್ಟ ವಿಷಯಗಳನ್ನು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಿ. ಹಳೆಯ ಕಹಿ ಘಟನೆಗಳನ್ನು ಮರೆತು ಮತ್ತೆ ಹೊಸ ಜೀವನ ಪ್ರಾರಂಭಿಸಿ. ಜೊತೆಯಲ್ಲಿ ಸಮಯ ಕಳಿಯಿರಿ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics