ದೇಶ

ಸಿಎಂ ಹುದ್ದೆಗೆ ನಿತೀಶ್ ನಾಲಾಯಕ್, ಮಹಾ ಮೈತ್ರಿಯಿಂದ ಪಕ್ಷ ಹೊರಬರಬೇಕು: ಆರ್ ಜೆಡಿ ಸಂಸದ

Srinivas Rao BV

ಪಾಟ್ನ: ಬಿಹಾರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಆರ್ ಜೆ ಡಿ, ಜೆಡಿಯು ನೊಂದಿಗಿನ ಮಹಾ ಮೈತ್ರಿಯಿಂದ ಹೊರಬರಬೇಕೆಂದು ಆರ್ ಜೆಡಿ ಪಕ್ಷದ ಸಂಸದ ಮೊಹಮ್ಮದ್ ತಸ್ಲಿಮುದ್ದೀನ್ ಹೇಳಿದ್ದಾರೆ.
ಜೆಡಿಯು ಮಹಾಮೈತ್ರಿ ಗೆ ಯಾವುದೇ ಸಮರ್ಥನೆ ಇಲ್ಲ. ಆರ್ ಜೆಡಿ ಮಹಾಮೈತ್ರಿಕೂಟದಿಂದ ಹೊರಬರಬೇಕೆಂಬುದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠ ಲಾಲು ಪ್ರಸಾದ್ ಯಾದವ್ ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು ತಸ್ಲಿಮುದ್ದೀನ್ ಒತ್ತಾಯಿಸಿದ್ದಾರೆ.  
ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಜಂಗಲ್ ರಾಜ್ ಪರಿಸ್ಥಿತಿ ನಿರ್ಮಾಣವಾಗಿದ್ದು ಅಪರಾಧ ಪ್ರಕರಣಗಳು ಹಿಂದೆಂದಿಗಿಂತಲೂ ಹೆಚ್ಚಾಗುತ್ತಿವೆ. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವುದಿರಲಿ, ಗ್ರಾಮಪಂಚಾಯಿತಿಯ ಮುಖ್ಯಸ್ಥರಾಗುವುದಕ್ಕೂ ಸೂಕ್ತ ವ್ಯಕ್ತಿಯಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಿತೀಶ್ ಕುಮಾರ್ ಅವರ ಕರ್ತವ್ಯ. ಒಂದು ವೇಳೆ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಹೋರಾಟ ಪ್ರಾರಂಭಿಸುವುದಾಗಿ ತಸ್ಲಿಮುದ್ದೀನ್ ಎಚ್ಚರಿಸಿದ್ದಾರೆ. 

SCROLL FOR NEXT