ದೇಶ

ಮೋದಿ ಸರ್ಕಾರಕ್ಕೆ 10 ರಲ್ಲಿ 7 ಅಂಕ ನೀಡಿದ ಅಸೋಚಾಮ್

Manjula VN

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ ಡಿಎ ಸರ್ಕಾರದ ಎರಡು ವರ್ಷದ ಸಾಧನೆಗೆ ಕೈಗಾರಿಕಾ ಮಂಡಳಿ ಅಸೋಚಾಮ್ 10ರಲ್ಲಿ 7 ಅಂಕಗಳನ್ನು ನೀಡಿದೆ.

ಕೆಲಸ ಪ್ರಗತಿ ಸ್ಥಿತಿಯಲ್ಲಿದೆ. ಆದರೆ, ತೆರಿಗೆ ನೀತಿ, ಬ್ಯಾಂಕುಗಳಲ್ಲಿನ ಅನುತ್ಪಾದಕ  ಸ್ವತ್ತು ವಿಷಯಗಳಿಗೆ ಸಂಬಂಧಿಸಿ ಇನ್ನಷ್ಟು ಸುಧಾರಣೆಯಾಗಬೇಕಿದೆ ಎಂದು ಕೈಗಾರಿಕಾ ಮಂಡಳಿ ಅಸೋಚಾಮ್ ಹೇಳಿದೆ.

ಸ್ಥೂಲ ಆರ್ಥಿಕತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಉತ್ತಮ ರೀತಿಯಲ್ಲಿ ಹೆಜ್ಜೆ ಇಡುತ್ತಿದೆ. ರಸ್ತೆ, ಹೆದ್ದಾರಿ, ರೈಲ್ವೆ ಮತ್ತು ಇಂಧನ ಕ್ಷೇತ್ರಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ ಎಂದು ಹೇಳಿರುವ ಅಸೋಚಾಮ್ ಮೋದಿ ಸರ್ಕಾರಕ್ಕೆ 10ರಲ್ಲಿ 7 ಅಂಕಗಳನ್ನು ನೀಡಿದೆ.

ತೆರಿಗೆ ವಿವಾದಗಳು, ಬ್ಯಾಂಕುಗಳಲ್ಲಿ ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ ತಡೆಗೆ ಮತ್ತು ಕೃಷಿ ಹಾಗೂ ಗ್ರಾಮೀಣ ಭಾರತದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಅಸೋಚಾಮ್ ಹೇಳಿದೆ. ಇದಲ್ಲದೆ ಸರ್ಕಾರಕ್ಕೆ ಸಲಹೆ ನೀಡಿರುವ ಅಸೋಚಾಮ್, ಕೃಷಿ ಕ್ಷೇತ್ರದ ಸುಧಾರಣೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿದೆ.

SCROLL FOR NEXT