ಉತ್ತರ ಪ್ರದೇಶ: ಭಾರತದಲ್ಲಿನ ರಸ್ತೆಗಳಿಗೆ ಗಾಂಧಿ ಕುಟುಂಬದವರ ಹೆಸರಿಟ್ಟಿರುವುದನ್ನು ಟೀಕೆ ಮಾಡಿ ಸರಣಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟ ರಿಷಿ ಕಪೂರ್ ಮೇಲೆ ಕಾಂಗ್ರೆಸ್ಸಿಗರು ಸಿಟ್ಟಾಗಿದ್ದಾರೆ. ಈ ಟ್ವೀಟ್‌ಗಳಿಂದ ಕುಪಿತಗೊಂಡ ಅಲಹಾಬಾದ್‌ನ ಕಾಂಗ್ರೆಸ್ ಕಾರ್ಯಕರ್ತರು ಶಿವಾಜಿಪಾರ್ಕ್‌ನ ಸುಲಭ್ ಶೌಚಾಲಯಕ್ಕೆ ರಿಷಿ ಕಪೂರ್‌ನ ಹೆಸರಿಟ್ಟು ಪ್ರತಿಭಟಿಸಿದ್ದಾರೆ.
ಗಾಂಧಿ ಕುಟುಂಬ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಆದ್ದರಿಂದಲೇ ಅವರ ಹೆಸರನ್ನು ರಸ್ತೆಗಳಿಗೆ, ವಿಮಾನ ನಿಲ್ದಾಣಗಳಿಗೆ ಮತ್ತು ರೈಲ್ವೇ ನಿಲ್ದಾಣಗಳಿಗಿಡಲಾಗಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರು ರಿಷಿ ಕಪೂರ್‌ಗೆ ಉತ್ತರಿಸಿದ್ದಾರೆ.
ಮೇ 17 ರಂದು ಸರಣಿ ಟ್ವೀಟ್ ಮಾಡಿದ ರಿಷಿ ಕಪೂರ್, ಎಲ್ಲದಕ್ಕೂ ಗಾಂಧಿ ಹೆಸರಿಡಲು ಇದೇನು ಅವರಪ್ಪನ ಆಸ್ತಿಯೇ? ಎಂದು ಗಾಂಧಿ ಕುಟುಂಬದ ವಿರುದ್ಧ ಗುಡುಗಿದ್ದರು.