ಸ್ಟಾಲಿನ್ ಗೆ ಆಸನ ವ್ಯವಸ್ತೆ ಬಗ್ಗೆ ಕರುಣಾನಿಧಿ ಕೋಪ 
ದೇಶ

ಜಯಾ ಪ್ರಮಾಣ: ಸ್ಟಾಲಿನ್ ಗೆ ಆಸನ ವ್ಯವಸ್ಥೆ ಬಗ್ಗೆ ಕರುಣಾನಿಧಿ ಕೋಪ

ಎರಡನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಅಧಿಕಾರ ವಹಿಸಿಕೊಂಡಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿನ ಆಸನ ವ್ಯವಸ್ಥೆ ಬಗ್ಗೆ ಡಿಎಂಕೆ ತಗಾದೆ ತೆಗೆದಿದೆ.

ಚೆನ್ನೈ: ಎರಡನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಎಐಎಡಿಎಂಕೆ ನಾಯಕಿ ಜಯಲಲಿತಾ ಅಧಿಕಾರ ವಹಿಸಿಕೊಂಡಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿನ ಆಸನ ವ್ಯವಸ್ಥೆ ಬಗ್ಗೆ ಡಿಎಂಕೆ ತಗಾದೆ ತೆಗೆದಿದೆ.
ಡಿಎಂಕೆ ನಾಯಕ, ಎಂ.ಕೆ.ಸ್ಟ್ಯಾಲಿನ್ ಗೆ ಶಾಸಕರು, ಮಾಜಿ ಸಚಿವರೊಂದಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಎಂದು ಡಿಎಂಕೆ ನಾಯಕ ಎಂ ಕರುಣಾನಿಧಿ ಆರೋಪ ಮಾಡಿದ್ದಾರೆ. ಚುನಾವಣೆ ಸೋತ ಎಐಎಡಿಎಂಕೆಯ ಮಿತ್ರ ಪಕ್ಷದ ನಾಯಕ ಆರ್ ಶರತ್ ಕುಮಾರ್ ಅವರಿಗೆ ಮುಂಭಾಗದ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ವಿರೋಧಪಕ್ಷದ ನಾಯಕರಾಗಿರುವ ಸ್ಟ್ಯಾಲಿನ್ ಗೆ ಮುಂಭಾಗದ ಸಾಲಿನಲ್ಲಿ ಕುಳಿತುಕೊಳ್ಳುವ ಅರ್ಹತೆ ಇತ್ತಾದರೂ ಅವರಿಗೆ  ಹಿಂಭಾಗದ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು ಎಂದು ಕರುಣಾನಿಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವ್ಯವಸ್ಥಿತ ರೀತಿಯಲ್ಲಿ ಡಿಎಂಕೆ ಅವಮಾನ ಮಾಡಲಾಗಿದೆ ಎಂದು ಡಿಎಂಕೆ ಜಲಲಿತಾ ಅವರ ಕ್ರಮವನ್ನು ಟೀಕಿಸಿದೆ. ಡಿಎಂಕೆ ಮುಖಂಡ ಸ್ಟ್ಯಾಲಿನ್ ಗೆ 16 ನೇ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಟ್ಯಾಲಿನ್ ಅವರೊಂದಿಗೆ ಡಿಎಂಕೆ ಮಾಜಿ ಸಚಿವರಾದ ಎವಿ ವೇಲು, ಶಾಸಕರಾದ ಶೇಖರ್ ಬಾಬು, ಸೆಲ್ವಂ ಸರಿದಂತೆ ಡಿಎಂಕೆ ಮಾಜಿ ಸಚಿವ, ಶಾಸಕರಿಗೂ ಆಸನ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT