ದೇಶ

ನೀಟ್: ರಾಷ್ಟ್ರಪತಿ ಭೇಟಿ ಮಾಡಿ ಸುಗ್ರೀವಾಜ್ಞೆ ಬಗ್ಗೆ ವಿವರಿಸಿದ ಸಚಿವ ನಡ್ಡಾ

Sumana Upadhyaya

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿ, ಸಮಾನ ವೈದ್ಯಕೀಯ ಪ್ರವೇಶ ಪರೀಕ್ಷೆ(ನೀಟ್)ನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ದಾರಿಯನ್ನು ಹಿಡಿಯಬೇಕಾದ ಅನಿವಾರ್ಯತೆ ಏಕೆ ಒದಗಿಬಂತು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ. ರಾಷ್ಟ್ರಪತಿಯವರು ಸಚಿವರ ವಿವರಣೆಗೆ ತೃಪ್ತರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೇಂದ್ರ ಸರ್ಕಾರದ ವಿಧೇಯಕಕ್ಕೆ ಸಹಿ ಹಾಕುವ ಮುನ್ನ ರಾಷ್ಟ್ರಪತಿಯವರು ಕೆಲವೊಂದಕ್ಕೆ ಸ್ಪಷ್ಟನೆ ಬಯಸಿದ್ದರು.ರಾಜ್ಯ ಸರ್ಕಾರಗಳನ್ನು ಈ ವರ್ಷ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡುವುದಕ್ಕೆ ಕಾನೂನು ಸಲಹೆ ಪಡೆಯಲು ರಾಷ್ಟ್ರಪತಿ ಬಯಸಿದ್ದಾರೆ.

ಕೇಂದ್ರ ಸರ್ಕಾರದ ವಿಧೇಯಕ ಜಾರಿಗೆ ಬಂದರೆ ರಾಜ್ಯ ಸರ್ಕಾರದ ವಿದ್ಯಾರ್ಥಿಗಳು ಜುಲೈ 24ರಂದು ನಡೆಯುವ ನೀಟ್ ಪರೀಕ್ಷೆ ಬರೆಯಬೇಕಾಗಿಲ್ಲ. ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ದೇಶಾದ್ಯಂತ ಏಕರೂಪ ನೀಟ್ ಪರೀಕ್ಷೆ ಜಾರಿಗೆ ಬರಲಿದೆ.

SCROLL FOR NEXT