ದೇಶ

'ಕಾಶ್ಮೀರ ದೇವಾಲಯ ಮಸೂದೆ ಅಂಗೀಕಾರ, ಪಂಡಿತರ ವಾಪಸ್ಸಾಗುವುದಕ್ಕೆ ಪೂರಕ'

Srinivas Rao BV

ಜಮ್ಮು: ವಿಧಾನಸಭೆಯಲ್ಲಿ ಕಾಶ್ಮೀರ ದೇವಾಲಯ ಹಾಗೂ ಪುಣ್ಯಕ್ಷೇತ್ರಗಳ ಮಸೂದೆ ಅಂಗೀಕಾರ ಪಂಡಿತರ ಪುನರ್ವಸತಿ ವಿಷಯದಲ್ಲಿ ಮಹತ್ವದ ಪರಿಣಾಮ ಬೀರಲಿದ್ದು, ಪಂಡಿತರು ಕಣಿವೆಗೆ ಮರಳಲು ಪೂರ್ವಭಾವಿ ಸಿದ್ಧತೆ ಇದ್ದಂತೆ ಎಂದು ಕಾಶ್ಮೀರಿ ಪಂಡಿತರ ಪರವಾಗಿ ಹೋರಾಟ ನಡೆಸುತ್ತಿರುವ ಸಂಘಟನೆ ಅಭಿಪ್ರಾಯಪಟ್ಟಿದೆ.
ಪಂಡಿತರ ಪುನರ್ವಸತಿ ಪರವಾಗಿ ಹೋರಾಟ ನಡೆಸುತ್ತಿರುವ ಪ್ರೇಮನಾಥ್ ಭಟ್ ಮೆಮೋರಿಯಲ್ ಟ್ರಸ್ಟ್(ಪಿಎನ್ ಬಿಎಂಟಿ) ನ ವಕ್ತಾರ ಆರ್ ಎಲ್ ಭಟ್, ಕಾಶ್ಮೀರದಲ್ಲಿರುವ ದೇವಾಲಯಗಳನ್ನು 'ಕೆಲವರ' ನಿಯಂತ್ರಣದಿಂದ ಹೊರತಂದು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿಸಬೇಕು ಎಂಬುದು ಕಾಶ್ಮೀರ ದೇವಾಲಯ, ಪುಣ್ಯ ಕ್ಷೇತ್ರ ಮಸೂದೆಯ ಆಶಯವಾಗಿದೆ ಎಂದು ಹೇಳಿದ್ದಾರೆ.
ಮಸೂದೆ ಅಂಗೀಕಾರಕ್ಕೆ ಪಿಎನ್ ಬಿಎಂಟಿ ಸಂಘಟನೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದು, ಈಗ ಮಸೂದೆ ಅಂಗೀಕಾರ, ಪಂಡಿತರ ವಾಪಸ್ಸಾಗುವುದಕ್ಕೆ ಪೂರ್ವಭಾವಿ ಷರತ್ತು ವ್ಹಿಸಿದಂತಾಗಿದ್ದು, ಪಂಡಿತರ ಪುನರ್ವಸತಿ ವಿಷಯಕ್ಕೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಮಸೂದೆ ಅಂಗೀಕಾರದಿಂದ ಕಾಶ್ಮೀರ ಕಣಿವೆಯಲ್ಲಿ ಚುನಾಯಿತ ದೇವಾಲಯ ಸಮಿತಿಯೊಂದು ಅಸ್ತಿತ್ವಕ್ಕೆ ಬರಲು ಸಾಧ್ಯವಾಗುತ್ತದೆ. ಮಸೂದೆಯಲ್ಲಿನ ಅಂಶಗಳು ಮಾತಾ ವೈಷ್ಣೋದೇವಿ ಪುಣ್ಯಕ್ಷೇತ್ರ ಮಂಡಳಿಯ ಆಶಯಗಳಿಗೆ ಪೂರಕವಾಗಿವೆ ಎಂದು ಆರ್ ಎಲ್ ಭಟ್ ತಿಳಿಸಿದ್ದಾರೆ.

SCROLL FOR NEXT