ನವದೆಹಲಿ: ಸರ್ಕಾರ ಆಹಾರ ಸಂಯೋಜಕವನ್ನಾಗಿ ಬಳಕೆ ಮಾಡುವ ಪೊಟಾಶಿಯಂ ಬ್ರೋಮೇಟ್ ಮೇಲೆ 15 ದಿನದೊಳಗಾಗಿ ನಿಷೇಧವೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಪಾಯಕಾರಿಯಾದ ಪೊಟಾಶಿಯಂ ಬ್ರೋಮೇಟ್ ಎಂಬುದು ಮಾನವರಲ್ಲಿ ಕ್ಯಾನ್ಸರ್ ತರಬಲ್ಲದಾಗಿದೆ. 11 ಸಾವಿರ ಆಹಾರ ಸಂಯೋಜಕವನ್ನಾಗಿ ಪೋಟಾಶಿಯಂ ಬ್ರೋಮೇಟ್ ನನ್ನು ಬಳಕೆ ಮಾಡಲಾಗುತ್ತದೆ. ಹಾಗಾಗಿ, ಭಾರತೀಯ ಆಹಾರ ಸುರಕ್ಷತಾ ಮಾನದಂಡ ಪ್ರಾಧಿಕಾರ (ಎಫ್ಎಸ್ಎಸ್ಎಐ) ಪೋಟಾಶಿಯಂ ಬ್ರೋಮೇಟ್ ಮೇಲೆ ನಿಷೇಧವೇರಲು ಶಿಫಾರಸು ಮಾಡಿದೆ.
ಎಫ್ ಎಸ್ ಎಸ್ ಎಐ ಸಿಇಓ ಪವನ್ ಕುಮಾರ್ ಮಾತನಾಡಿ, ಇದೊಂದು ಅಪಾಯಕಾರಿ ಅಂಶವಾಗಿದ್ದು, ಕೆಲ ತಿಂಡಿಗಳನ್ನು ಬೇಕ್ ಮಾಡುವ ಮೊದಲು ಹಿಟ್ಟಿಗೆ ಪೊಟಾಶಿಯಂ ಬ್ರೋಮೇಟ್ ಹಾಗೂ ಪೊಟಾಶಿಯಂ ಐಯೊಡೇಟ್ ಉಪಯೋಗಿಸಲಾಗುತ್ತದೆ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದ್ದು, ಇದನ್ನು ನಿಷೇಧಗೊಳಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ನಡೆಸಿದ ತನಿಖಾ ವರದಿಯನ್ನು ಆರೋಗ್ಯ ಸಚಿವಾಲಯಕ್ಕೆ ಕಳುಹಿಸಲಾಗಿದೆ. ವರದಿ ಆಧಾರದ ಮೇರೆಗೆ ಕ್ರಮಕೈಗೊಳ್ಳಲು ಒಂದೆರಡು ವಾರಗಳು ತೆಗೆದುಕೊಳ್ಳುತ್ತದೆ. ಪೋಟಾಶಿಯಂ ಐಯೋಡೇಟ್ ಬಗ್ಗೆ ಇನ್ನು ಪರಿಶೀಲನೆ ನಡೆಸುತ್ತಿದ್ದು, ದಾಖಲೆಗಳು ಸಿಕ್ಕ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ.
ದೆಹಲಿಯ ಹಲಾವರು ಅಂಗಡಿಗಳಿಂದ 38 ಸ್ಯಾಂಪಲ್ ಗಳನ್ನು ಪರೀಕ್ಷಿಸಿ ಅವುಗಳಲ್ಲಿರುವ ಪೊಟಾಶಿಯಂ ಬ್ರೋಮೇಟ್ ಹಾಗೂ ಪೊಟಾಶಿಯಂ ಐಯೊಡೇಟ್ ಅಂಶಗಳಿಗಾಗಿ ಪರೀಕ್ಷೆ ನಡೆಸಲಾಯಿತು. ಶೇ.84ಕ್ಕಿಂತಲೂ ಅಧಿಕ ಉತ್ಪನ್ನಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಪೊಟಾಶಿಯಂ ಬ್ರೋಮೇಟ್ ಹಾಗೂ ಪೊಟಾಶಿಯಂ ಐಯೊಡೇಟ್ ಬಳಕೆಯನ್ನು ಹಲವಾರು ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೆ ಭಾರತದಲ್ಲಿ ಮಾತ್ರ ಈ ಉತ್ಪನ್ನಗಳು ನಿಷೇಧಗೊಂಡಿರಲಿಲ್ಲ.
ವರದಿ ಬಗ್ಗೆ ಪ್ರತಿಕ್ರಯಿಸಿದ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ 'ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಎಎಸ್ ಎಸ್ ಎಐಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics