ಲಕ್ನೋದ ಚಾರ್ ಬಾಗ್ ರೈಲ್ವೆ ನಿಲ್ದಾಣ 
ದೇಶ

ಫಾಸ್ಟ್ ಟ್ರ್ಯಾಕ್ ಸ್ಮಾರ್ಟ್ ಸಿಟಿ ಸ್ಪರ್ಧೆ: ಲಕ್ನೋ ನಗರಕ್ಕೆ ಮೊದಲ ಸ್ಥಾನ

ಫಾಸ್ಟ್ ಟ್ರ್ಯಾಕ್ ಸ್ಮಾರ್ಟ್ ಸಿಟಿ ಸ್ಪರ್ಧೆಯ 13 ವಿಜೇತ ನಗರಗಳನ್ನು ಮಂಗಳವಾರ ಕೇಂದ್ರ ನಗರಾಭಿವೃದ್ಧಿ ಸಚಿವ...

ನವದೆಹಲಿ: ಫಾಸ್ಟ್ ಟ್ರ್ಯಾಕ್ ಸ್ಮಾರ್ಟ್ ಸಿಟಿ ಸ್ಪರ್ಧೆಯ 13 ವಿಜೇತ ನಗರಗಳನ್ನು ಮಂಗಳವಾರ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಬಿಡುಗಡೆ ಮಾಡಿದ್ದು, ಲಕ್ನೋ ನಗರ ಮೊದಲ ಸ್ಥಾನ ಗಳಿಸಿದೆ.

ನಂತರದಲ್ಲಿ ವಾರಂಗಲ್, ಧರಂಶಾಲಾ, ಚಂಡೀಗಢ, ರಾಯ್ ಪುರ್, ನ್ಯೂ ಟೌನ್ ಕೋಲ್ಕತ್ತಾ, ಬಗಲ್ಪುರ್, ಪಣಜಿ, ಪೋರ್ಟ್ ಬ್ಲೇರ್, ಇಂಫಾಲ್, ರಾಂಚಿ, ಅಗರ್ತಲಾ, ಫರಿದಾಬಾದ್ ನಗರಗಳಿವೆ.

ಇನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 23 ನಗರಗಳು ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಅರ್ಹತೆ ಪಡೆಯಲು ವಿಫಲವಾಗಿವೆ. ಕಳೆದ ಜನವರಿ 28ರಂದು ನಡೆದ ಸ್ಮಾರ್ಟ್ ಸಿಟಿ ಚಾಲೆಂಜ್ ಸ್ಪರ್ಧೆಯಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿದ್ದವು.

ವಿದ್ಯುತ್ ಮತ್ತು ನೀರು ಸರಬರಾಜು, ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ದಕ್ಷ ನಗರ ಚಲನಶೀಲತೆ ಮತ್ತು ಸಾರ್ವಜನಿಕ ಸಾರಿಗೆ, ಮಾಹಿತಿ ತಂತ್ರಜ್ಞಾನ ಸಂಪರ್ಕ, ಇ-ಆಡಳಿತ ಮತ್ತು ನಾಗರಿಕರ ಭಾಗವಹಿಸುವಿಕೆ ಸ್ಮಾರ್ಟ್ ಸಿಟಿ ಯೋಜನೆಯ ಪ್ರಮುಖ ಅಂಶಗಳಾಗಿವೆ.

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ದೇಶಾದ್ಯಂತ 2019-20ರೊಳಗೆ 100 ನಗರಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕೆ 48 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ಮಿಷನ್ ಮಾರ್ಗಸೂಚಿ ಪ್ರಕಾರ, 2015-16ರಲ್ಲಿ 20 ಸ್ಮಾರ್ಟ್ ಸಿಟಿಗಳನ್ನು ಆಯ್ಕೆ ಮಾಡಲಾಗಿತ್ತು. ಇನ್ನು 40 ನಗರಗಳನ್ನು ಮುಂದಿನ ವರ್ಷ ಆಯ್ಕೆ ಮಾಡಲಾಗುತ್ತದೆ. ಸ್ಮಾರ್ಟ್ ಸಿಟಿ ಸ್ಪರ್ಧೆಗೆ ಆಯ್ಕೆಗೊಂಡ ನಗರಗಳ ಅಭಿವೃದ್ಧಿಗೆ ಮೊದಲ ವರ್ಷ 200 ಕೋಟಿ ರೂಪಾಯಿ ಕೇಂದ್ರದ ನೆರವು ಮತ್ತು ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂಪಾಯಿ ನೆರವು ನೀಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!