ಜೈಪುರ್: ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮದ್ಯ ಸೇವನೆ ಮಾಡಿ ಬೆತ್ತಲೆ ತಿರುಗುತ್ತಾರೆ, ಸೆಕ್ಸ್ ಮಾಡುತ್ತಾರೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಭಾರತೀಯ ಜನತಾ ಪಕ್ಷದ ಶಾಸಕ ಗ್ಯಾನ್ ದೇವ್ ಅಹುಜಾ ಈಗ ಮತ್ತೊಂದು ಹೇಳಿಕೆಯ ಮೂಲಕ ವಿವಾದಕ್ಕೀಡಾಗಿದ್ದಾರೆ.
ದೇಶದಲ್ಲಿ ಅತ್ಯಾಚಾರ ಹೆಚ್ಜಾಗಲು ನೆಹರು ಮತ್ತು ಗಾಂಧಿ ಕುಟುಂಬವೇ ಕಾರಣ. ಇರಾಖ್‌ನಲ್ಲಿ ಸದ್ದಾಂ ಹುಸೇನ್‌ನ ಪ್ರತಿಮೆಯನ್ನು ಜನರು ಕೆಡವಿ ಪುಡಿ ಪುಡಿ ಮಾಡಿದಂತೆ ಗಾಂಧಿ ಹೆಸರಲ್ಲಿರುವ ಪ್ರತಿಮೆಗಳನ್ನು ಸ್ಮಾರಕಗಳನ್ನು ತಕ್ಷಣವೇ ಪುಡಿ ಮಾಡಬೇಕೆಂದು ಅಲಾವರ್ ರಾಮಗಢದ ಬಿಜೆಪಿ ಶಾಸಕ ಗ್ಯಾನ್‌ದೇವ್ ಅಹುಜಾ ಆದೇಶಿಸಿದ್ದಾರೆ.
ಅದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ದೇವತಾ ಮನುಷ್ಯ ಎಂದು ಹೇಳುವ ಈ ಶಾಸಕ, ಮೋದಿ ಎಲ್ಲಾ ಅನಿಷ್ಟಗಳನ್ನು ದೂರ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಅಹುಜಾರ ಈ ಹೇಳಿಕೆಗೆ ರಾಜಸ್ತಾನದ ಕಾಂಗ್ರೆಸ್ ಘಟಕ ಪ್ರತಿಕ್ರಿಯಿಸಿದ್ದು, ಗ್ಯಾನ್‌ದೇವ್‌ಗೆ ಮಂಡೆ ಸಮ ಇಲ್ಲ, ಆತನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕೆಂದು ಹೇಳಿದೆ.
ಈ ಹಿಂದೆ ದೆಹಲಿಯಲ್ಲಿ ಶೇ. 50ರಷ್ಟು ಅತ್ಯಾಚಾರ ಮತ್ತು ದೌರ್ಜನ್ಯ ನಡೆಯುವುದಕ್ಕೆ ಜೆಎನ್‌ಯು ವಿದ್ಯಾರ್ಥಿಗಳೇ ಕಾರಣ ಎಂದಿದ್ದರು. ಅಷ್ಟೇ ಅಲ್ಲ, ಜೆಎನ್‌ಯು ಕ್ಯಾಂಪಸ್‌ನಲ್ಲಿ 3,000 ಕಾಂಡೋಮ್‌ಗಳು ಮತ್ತು ಗರ್ಭನಿರೋಧಕ ಇಂಜೆಕ್ಷನ್ ಗಳನ್ನು ದಿನ ನಿತ್ಯ ಬಳಸಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳು ನಮ್ಮ ಮಗಳು ಮತ್ತು ಸಹೋದರಿಯರೊಂದಿಗೆ ಈ ರೀತಿ ಅಸಭ್ಯ ವರ್ತನೆಗಳನ್ನು ಮಾಡುತ್ತಾರೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.