ದೇಶ

ಎನ್ ಆರ್ ಐಗಳಿಗೆ ಸಿಹಿಸುದ್ದಿ: ಆನ್ ಲೈನ್ ಮೂಲಕ ಪ್ರಮಾಣಪತ್ರ ದೃಢೀಕರಣ

Sumana Upadhyaya

ನವದೆಹಲಿ: 2014ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ನಂತರ ಭಾರತೀಯ ಜನಸಮುದಾಯಕ್ಕೆ ಅನೇಕ ಕೆಲಸ ಮಾಡಿರುವ ನರೇಂದ್ರ ಮೋದಿ ಇದೀಗ ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯ ನಾಗರಿಕರಿಗೆ ಹೆಚ್ಚಿನ ಸೌಕರ್ಯ ವಿಸ್ತರಿಸಲು ಮುಂದಾಗಿದ್ದಾರೆ.

ಉನ್ನತ ಮೂಲಗಳ ಪ್ರಕಾರ, ಪ್ರಧಾನ ಮಂತ್ರಿ ಕಾರ್ಯಾಲಯ ವಿದೇಶದಲ್ಲಿರುವ ಭಾರತೀಯರು ತಮ್ಮ ಪ್ರಮಾಣಪತ್ರ ದೃಢೀಕರಿಸಲು ಅಲ್ಲಿ ಖುದ್ದು ಹಾಜರಾಗದೆ ಆನ್ ಲೈನ್ ಮೂಲಕ ಮಾಡಿಸಿಕೊಳ್ಳುವ ಯಾಂತ್ರಿಕ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

ವಿದೇಶಗಳಲ್ಲಿರುವ ಭಾರತೀಯ ನಾಗರಿಕರ ದಾಖಲೆಗಳನ್ನು ಪರಿಶೀಲಿಸಲು ಸರ್ಕಾರ ವಿದ್ಯುನ್ಮಾನ ವೇದಿಕೆಯನ್ನು ಸ್ಥಾಪಿಸಲಿದೆ. ಈ ಮೂಲಕ ನಾಗರಿಕರು ದಾಖಲೆಗಳ ಪರಿಶೀಲನೆ ಕೇಂದ್ರಕ್ಕೆ ಹೋಗುವುದು ತಪ್ಪುತ್ತದೆ. ಹಣ, ಸಮಯ ಉಳಿತಾಯವಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವರ್ಷಾಂತ್ಯಕ್ಕೆ ಆನ್ ಲೈನ್ ಇ-ಸೇವೆ ಪೋರ್ಟಲ್ ಅಭಿವೃದ್ಧಿಪಡಿಸಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯೊಂದಿಗೆ ಕೈ ಜೋಡಿಸುವಂತೆ ವಿದೇಶಾಂಗ ಇಲಾಖೆಗೆ ಕೇಳಲಾಗಿದೆ. ದಾಖಲೆಗಳನ್ನು ಪರಿಶೀಲಿಸುವ ಮಧ್ಯಸ್ಥಿಕೆಗಾರರಿಗೆ ಈ ವ್ಯವಸ್ಥೆ ಲಭ್ಯವಾಗುತ್ತದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಪಾಸ್ ವರ್ಡ್ ಮತ್ತು ಪರಿಶೀಲನೆ ಕೋಡ್ ಮೂಲಕ ತಮ್ಮ ದಾಖಲೆಗಳನ್ನು ಪಡೆದುಕೊಳ್ಳಬಹುದು.

SCROLL FOR NEXT