ಜಯಲಲಿತಾ 
ದೇಶ

ಸ್ಟ್ಯಾಲಿನ್, ಡಿಎಂಕೆಗೆ ಅಗೌರವ ತೋರುವ ಉದ್ದೇಶ ಹೊಂದಿರಲಿಲ್ಲಾ: ಜಯಾ

ಡಿಎಂಕೆ ನಾಯಕ ಸ್ಟ್ಯಾಲಿನ್ ಮತ್ತು ಡಿಎಂಕೆ ಪಕ್ಷಕ್ಕೆ ಅಗೌರವ ತೋರುವ ಉದ್ದೇಶ ಹೊಂದಿರಲಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ...

ಚೆನ್ನೈ: ಡಿಎಂಕೆ ನಾಯಕ ಸ್ಟ್ಯಾಲಿನ್ ಮತ್ತು ಡಿಎಂಕೆ ಪಕ್ಷಕ್ಕೆ ಅಗೌರವ ತೋರುವ ಉದ್ದೇಶ ಹೊಂದಿರಲಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ. 
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸ್ಟ್ಯಾಲಿನ್ ಆಗಮಿಸಿದ್ದು ಸಂತಸ ತಂದಿದ್ದು, ಸಮಾರಂಭದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ. 
ಎಂ ಕೆ ಸ್ಟ್ಯಾಲಿನ್ ಅವರಿಗೆ ಶಾಸಕರು, ಮಾಜಿ ಸಚಿವರೊಂದಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಎಂದು ಡಿಎಂಕೆ ನಾಯಕ ಎಂ ಕರಣಾನಿಧಿ ಆರೋಪ ಮಾಡಿದ್ದರು. 
ಆರೋಪವನ್ನು ತಳ್ಳಿ ಹಾಕಿರುವ ಜಯಲಲಿತಾ, ಉದ್ದೇಶ ಪೂರ್ವಕವಾಗಿ ಸ್ಟ್ಯಾಲಿನ್ ಅವರನ್ನು ಹಿಂಬದಿಯಲ್ಲಿ ಕೂರಿಸಿಲ್ಲ. ಸಾರ್ವಜನಿಕ ಇಲಾಖೆಗೆ ಪ್ರೋಟಾಕಾಲ್ ಕೈಪಿಡಿ ಆಧಾರದ ಮೇಲೆ ಕುರ್ಚಿಗಳನ್ನು ವ್ಯವಸ್ಥೆ ಮಾಡಿ ಎಂದು ಸೂಚಿಸಲಾಗಿತ್ತು. ಆದರೆ, ಅಲ್ಲಿ ಏನೋ ತಪ್ಪಾಗಿದೆ. ಇದರಿಂದ ಸ್ಟ್ಯಾಲಿನ್ ಅವರಿಗೆ ಅಸಮಾಧಾನವಾಗಿದೆ ಎಂದು ಅರ್ಥವಾಗುತ್ತದೆ. ಸ್ಟ್ಯಾಲಿನ್ ಕಾರ್ಯಕ್ರಮಕ್ಕೆ ಬಂದಿದ್ದಾರೆಂಬುದು ನನ್ನ ಗಮನಕ್ಕೆ ಬಂದಿದ್ದರೆ, ಅಧಿಕಾರಿಗಳಿಗೆ ಅವರನ್ನು ಮೊದಲ ಸಾಲಿನಲ್ಲಿ ಕೂರಿಸಲು ಸೂಚಿಸುತ್ತಿದ್ದೆ. ಆದರೆ, ಅವರು ಬಂದಿರುವುದಾಗಿ ಯಾರು ನನಗೆ ಮಾಹಿತಿ ನೀಡಿರಲಿಲ್ಲ ಎಂದು ಅವರು ಜಯಲಲಿತಾ ಸ್ಪಷ್ಟನೇ ನೀಡಿದ್ದಾರೆ. 
ಡಿಎಂಕೆ ಮುಖಂಡ ಸ್ಟ್ಯಾಲಿನ್ ಗೆ 16 ನೇ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಟ್ಯಾಲಿನ್ ಅವರೊಂದಿಗೆ ಡಿಎಂಕೆ ಮಾಜಿ ಸಚಿವರಾದ ಎವಿ ವೇಲು, ಶಾಸಕರಾದ ಶೇಖರ್ ಬಾಬು, ಸೆಲ್ವಂ ಸರಿದಂತೆ ಡಿಎಂಕೆ ಮಾಜಿ ಸಚಿವ, ಶಾಸಕರಿಗೂ ಆಸನ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

SCROLL FOR NEXT