ನವದೆಹಲಿ: ಆಫ್ರಿಕಾ ಪ್ರಜೆಗಳ ಸುರಕ್ಷತೆಗಾಗಿ ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಹೇಳಿದ್ದಾರೆ.
ಭಾರತ ಸರ್ಕಾರ ಆಫ್ರಿಕಾ ಪ್ರಜೆಗಳಿಗೆ ಸುರಕ್ಷತೆ ನೀಡುತ್ತದೆ ಎಂದು ಆಫ್ರಿಕಾ ಅಧಿಕಾರಿಗಳನ್ನು ಭೇಟಿ ಮಾಡಿ ಭರವಸೆ ನೀಡಿ ಎಂದು ತನ್ನ ಸಹದ್ಯೋಗಿಗಳಿಗೆ ಮತ್ತು ಕೇಂದ್ರ ಸಚಿವ ವಿಕೆ ಸಿಂಗ್ ಅವರಿಗೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ.
ಮೇ 20ರಂದು ದೆಹಲಿಯ ದಕ್ಷಿಣ ಭಾಗದಲ್ಲಿ ಆಪ್ರಿಕಾದ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸುಷ್ಮಾ ಸ್ವರಾಜ್ ಆಫ್ರಿಕಾ ಪ್ರಜೆಗಳ ಸುರಕ್ಷತೆಗೆ ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ.
ದೆಹಲಿಗೆ ಆಗಮಿಸಿರುವ ಆಫ್ರಿಕಾ ದೇಶದ ಅಧಿಕಾರಿಗಳನ್ನು ಭೇಟಿಯಾಗಿ ಆಫ್ರಿಕಾ ಪ್ರಜೆಗಳಿಗೆ ಸುರಕ್ಷತೆ ಮತ್ತು ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿ ಎಂದು ಸಹದ್ಯೋಗಿಗಳಿಗೆ ಸೂಚಿಸಲಾಗಿದೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ, ಮೆಟ್ರೋ ನಗರಗಳಲ್ಲಿ ಆಫ್ರಿಕಾದ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರಿಗೆ ಸೂಕ್ತ ಭದ್ರತೆ ನೀಡುವುದರ ಬಗ್ಗೆ ಭರವಸೆ ನೀಡಲಾಗುವುದು. ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿ, ವಿದೇಶಿಯರ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics