ಡೊಂಬಿವಿಲಿ: ಮುಂಬಯಿಯ ಥಾಣೆಯ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂರು ಮಂದಿ ಸಾವನ್ನಪ್ಪಿ ಮೂವತ್ತು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಮುಂಬಯಿ ನಗರದ 50 ಕಿಮೀ ದೂರದಲ್ಲಿರುವ ಪೂರ್ವ ಡೊಂಬಿವಿಲಿ ಎಂಐಡಿಸಿ 2ನೇ ಹಂತದಲ್ಲಿರುವ ಆಚಾರ್ಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ದುರಂತ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಸುಮಾರು 3 ರಿಂದ ನಾಲ್ಕು ಕಿಮೀ ದೂರದವರೆಗೂ ಬೆಂಕಿ ಕೆನ್ನಾಲಗೆ ಆವರಿಸಿತ್ತು. ಸ್ಪೋಟದಿಂದಾಗಿ ಅಕ್ಕಪಕ್ಕದ ಮನೆಯ ಕಿಟಕಿ ಬಾಗಿಲುಗಳು ಹಾನಿಗೊಂಡಿವೆ.
ಇನ್ನೂ ಅಗ್ನಿಶಾಮಕ ದಳ ವಾಹನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಇನ್ನೂ ಗಾಯಗೊಂಡವರನ್ನು ಡೊಂಬಿವಿಲಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.