ಮುಜಾಫರ್ ನಗರ: ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು, ಆ ಗುಂಡು ಪತ್ನಿಗೆ ತಗುಲಿರುವ ಘಟನೆ ಮುಜಾಫರ್ ನಗರದಲ್ಲಿ ಗುರುವಾರ ನಡೆದಿದೆ.
ರೇಷ್ಮಾ ಗಾಯಗೊಂಡ ಮಹಿಳೆ. ರೇಷ್ಮಾ ಪತಿ ಜೇಮ್ ಶೆಡ್ ತನ್ನ ತಮ್ಮನ ಮದುವೆ ಸಮಾರಂಭದಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪತ್ನಿಗೆ ಗುಂಡು ತಗುಲಿದೆ.
ರೇಷ್ಮಾ ಪ್ರಾಣಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೇಮ್ ಶೆಡ್ ನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.