ದೇಶ

ಆರೋಪ ಸಾಬೀತಾದರೆ ಮಾತ್ರ ಖಾಡ್ಸೆ ವಿರುದ್ಧ ಕ್ರಮ: ಕಿರಣ್ ರಿಜಿಜು

Mainashree
ಪಣಜಿ: ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಾಡ್ಸೆ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಹೊಂದಿದ್ದಾರೆಂಬ ಆರೋಪ ಸಾಬೀತಾದರೆ ಮಾತ್ರ ಖಾಡ್ಸೆ ವಿರುದ್ಧ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಿಂದ ಮಹಾರಾಷ್ಟ್ರದ ಬಿಜೆಪಿ ಮುಖಂಡ ಕಂದಾಯ ಸಚಿವ ಏಕನಾಥ್ ಖಾಡ್ಸೆ ಅವರಿಗೆ ಅತೀ ಹೆಚ್ಚು ಬಾರಿ ಕರೆ ಮಾಡಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು. 
ಎಎಪಿ ನಾಯಕಿ ಪ್ರೀತಿ ಶರ್ಮಾ ಮೆನೋನ್ ಅವರು, ಮಹಾರಾಷ್ಟ್ರ ಸಚಿವರು ದಾವೂದ್ ಇಬ್ರಾಹಿಂನಿಂದ ಬಂದ ಕಾಲ್ ಗಳನ್ನು ಹಲವು ಬಾರಿ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನು ಖಾಡ್ಸೆ ತಳ್ಳಿಹಾಕಿದ್ದು, ನಾಯಕಿಯ ಆರೋಪ ಆಧಾರ ರಹಿತ, ಆ ಮೊಬೈಲ್ ನಂಬರ್ ಅನ್ನು ಕಳೆದ ಒಂದು ವರ್ಷಗಳಿಂದ ನಾನು ಬಳಸುತ್ತಿಲ್ಲ ಎಂದು ಸ್ಪಷ್ಟನೇ ನೀಡಿದ್ದರು. 
ಖಾಡ್ಸೆಗೆ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕವಿದೆ ಎಂದು ಆರೋಪ ಮಾಡಲಾಗಿದೆ. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಖಾಡ್ಸೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರೆ, ಮೊದಲು ಆರೋಪ ಸಾಬೀತಾಗಬೇಕು ಎಂದು ರಿಜಿಜು ತಿಳಿಸಿದ್ದಾರೆ.
SCROLL FOR NEXT