ದೇಶ

'ರಾ' ಮಾಜಿ ಮುಖ್ಯಸ್ಥ ಎಕೆ ವರ್ಮಾ ಅಕ್ರಮ ಆಸ್ತಿ: ಸಿಬಿಐ ತನಿಖೆಗೆ ಆದೇಶ

Mainashree
ನವದೆಹಲಿ: ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ(ರಾ) ಮಾಜಿ ಮುಖ್ಯಸ್ಥ ಎ ಕೆ ವರ್ಮಾ ಅಕ್ರಮ ಆಸ್ತಿ ಬಗ್ಗೆ ತನಿಖೆ ನಡೆಸಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಸಿಬಿಐಗೆ ಸೂಚಿಸಿದೆ.
ತಿಸ್ ಹಜಾರಿ ವಿಶೇಷ ನ್ಯಾಯಾಲಯ ಎ ಕೆ ವರ್ಮಾ ಅವರ ಅಕ್ರಮ ಆಸ್ತಿ ಕುರಿತು ತನಿಖೆ ನಡೆಸುವಂತೆ 2013 ಫೆಬ್ರವರಿ 18ರಂದು ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವರ್ಮಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ವರ್ಮಾ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. 
ರಾ ಮಾಜಿ ನೌಕರ ಆರ್ ಕೆ ಯಾದವ್ ಅವರು ವರ್ಮಾ ವಿರುದ್ಧ ದೂರು ದಾಖಲಿಸಿದ್ದರು. ತದ ನಂತರ ಯಾದವ್ ಅವರು ವರ್ಮಾಗೆ ಸಮನ್ಸ್ ಜಾರಿ ಮಾಡಿ ಎಂದು ಮನವಿ ಮಾಡಿದ್ದರು. ಯಾದವ್ ಅವರು 13 ಸಾಕ್ಷಿಗಳನ್ನು ಹಾಜರುಪಡಿಸಿದ್ದು, ವರ್ಮಾ ಅಕ್ರಮ ಆಸ್ತಿ ವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ದೂರುದಾರರು ಬಲವಾದ ಸಾಕ್ಷಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕೋರ್ಟ್ ಹೇಳಿತ್ತು. 
ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯ ಎ ಕೆ ವರ್ಮಾ ಅಕ್ರಮ ಆಸ್ತಿ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದೆ.
SCROLL FOR NEXT