ದೇಶ

ಪೋಸ್ಟ್ ಮೂಲಕ ಗಂಗಾಜಲ ಪೂರೈಕೆಗೆ ಕೇಂದ್ರ ಸರ್ಕಾರದ ಹೊಸ ಯೋಜನೆ

Srinivas Rao BV

ಗತಕಾಲದ ಅಂಚೆ ವ್ಯವಸ್ಥೆಗೆ ಹೊಸ ಕಾಯಕಲ್ಪ ನೀಡಿ, ಅಭಿವೃದ್ಧಿಪಡಿಸಲು ಚಿಂತನೆ ನಡೆಸಿರುವ ಕೇಂದ್ರ ಸರ್ಕಾರ ಮನೆ ಮನೆಗೆ ಗಂಗಾ ಜಲ ತಲುಪಿಸಲು ಅಂಚೆ ವ್ಯವಸ್ಥೆಯನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದೆ. 
ಕೇಂದ್ರ ಸರ್ಕಾರದ ಯೋಜನೆಯ ಪ್ರಕಾರವಾಗಿ ಇನ್ನು ಮುಂದೆ ಪೋಸ್ಟ್ ಮ್ಯಾನ್ ಗಳು ಮನೆ ಮನೆಗೆ ಪತ್ರ ತಲುಪಿಸುವಂತೆ ಗಂಗಾಜಾಲವನ್ನು ತಲುಪಿಸಲಿದ್ದಾರೆ. ಇದಕ್ಕಾಗಿ ಇ- ಕಾಮರ್ಸ್ ವ್ಯವಸ್ಥೆಯನ್ನು ಬಳಸಿಕೊಂಡು ಹರಿದ್ವಾರ, ಹೃಷಿಕೇಶಗಳಿಂದ ದೇಶದ ವಿವಿಧ ಭಾಗಗಳಲ್ಲಿ ಅಗತ್ಯವಿರುವ ಜನರಿಗೆ ಅಂಚೆ ಮೂಲಕ ಗಂಗಾ ಜಲ ತಲುಪಿಸುವ ವ್ಯವಸ್ಥೆ ಮಾಡಲು ಅಂಚೆ ಇಲಾಖೆಗೆ ಸೂಚಿಸಿರುವುದಾಗಿ ಮಾಹಿತಿ ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಅಂಚೆ ಇಲಾಖೆ ದೇಶದೆಲ್ಲೆಡೆ ತನ್ನ ಜಾಲವನ್ನು ಹೊಂದಿದ್ದು, ಮೊಬೈಲ್, ಬಟ್ಟೆಗಳು ಹಾಗೂ ಇನ್ನಿತರ ವಸ್ತುಗಳನ್ನೂ ಇ-ಕಾಮರ್ಸ್ ಮೂಲಕ ಜನರಿಗೆ ಅವರಿರುವ ಸ್ಥಳಕ್ಕೆ ತಲುಪಿಸಲು ಸಾಧ್ಯವಾಗಿದೆ. ಇದೇ ಮಾದರಿಯಲ್ಲಿ ದೇಶಾದ್ಯಂತ ಹೆಚ್ಚು ಬೇಡಿಕೆ ಹೊಂದಿರುವ ಗಂಗಾ ಜಾಲವನ್ನೂ ಮನೆ ಮನೆಗಳಿಗೆ ತಲುಪಿಸಬಹುದು ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದಕ್ಕಾಗಿ ಕೆಲವು ಖಾಸಗಿ ಇ-ಕಾಮರ್ಸ್ ಕಂಪನಿಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂಚೆ ಮೂಲಕ ಗಂಗಾಜಾಲವನ್ನು ಪೂರೈಕೆ ಮಾಡುವ ವ್ಯವಸ್ಥೆಯ ಕುರಿತ ಸಂಪೂರ್ಣ ವಿವರಗಳು ಅಂತಿಮಗೊಳ್ಳುತ್ತಿದೆ ಎಂದು ಅಂಚೆ ಇಲಾಖೆ ಕಾರ್ಯದರ್ಶಿ ಎಸ್ ಕೆ ಸಿನ್ಹಾ ಮಾಹಿತಿ ನೀಡಿದ್ದಾರೆ.

SCROLL FOR NEXT