ಮೃತ ಮಹಿಳೆ ಜಾನ್ಸಿ 
ದೇಶ

ವೇಶ್ಯಾವಾಟಿಕೆ ಮಾಡುವಂತೆ ತಾಯಿ ಮತ್ತು ಗಂಡನಿಂದ ಒತ್ತಾಯ: ಮಹಿಳೆ ಆತ್ಮಹತ್ಯೆ

: ಮಾಂಸ ದಂಧೆಯಲ್ಲಿ ತೊಡಗುವಂತೆ ಹೆತ್ತ ತಾಯಿ ಮತ್ತು ಗಂಡ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ 22 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

ನಲ್ಗೊಂಡ: ಮಾಂಸ ದಂಧೆಯಲ್ಲಿ ತೊಡಗುವಂತೆ ಹೆತ್ತ ತಾಯಿ ಮತ್ತು ಗಂಡ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ 22 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಲ್ಗೊಂಡಾದಲ್ಲಿ ನಡೆದಿದೆ.

ಮೇ-24 ರಂದು ಬಿಟೆಕ್ ವಿದ್ಯಾರ್ಥಿನಿ ಜಾನ್ಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೆಲವು ವರ್ಷಗಳ ಹಿಂದೆ ಈಕೆ ವಿಜಿಯೇಂದರ್ ರೆಡ್ಡಿ ಎಂಬಾತನನ್ನು ವಿವಾಹವಾಗಿದ್ದಳು.

ಆತ್ಮಹತ್ಯೆಗೂ ಮುನ್ನ ಜಾನ್ಸಿ ಪೊಲೀಸರಿಗೆ ಪತ್ರ ಬರೆದು ಸಾವಿಗೆ ಶರಣಾಗಿದ್ದಳು. ಜೊತೆಗೆ ಈಕೆ ಎಸ್ ಪಿ, ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗಳಿಗೂ ಸಹ ಪತ್ರ ಬರೆದಿದ್ದಳು.

ವಿಜೆಯಂದರ್ ಗೆ ತನ್ನ ತಾಯಿ ಪದ್ಮ ಜೊತೆ ಅನೈತಿಕ ಸಂಬಂಧವಿತ್ತು. ಹೀಗಾಗಿ ನನ್ನನ್ನು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸುತ್ತಿದ್ದುದಾಗಿ ಪತ್ರದಲ್ಲಿ ಜಾನ್ಸಿ ವಿವರಿಸಿದ್ದಾಳೆ.

ಮೇ 23 ರಂದು ಪರೀಕ್ಷೆಗಾಗಿ ಹೈದರಾಬಾದ್ ನಲ್ಲಿದ್ದ ಜಾನ್ಸಿ, ಅದೇ ದಿನ ವಿಷ ಸೇವಿಸಿ, ನಕ್ರೇಲ್ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಇತರ ಅಧಿಕಾರಿಗಳಿಗೆ ಪತ್ರ ಬರೆದು ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಳು. ನಂತರ ಅದಾದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಳು.

ನಂತರ ಜಾನ್ಸಿ ಶವವನ್ನು ಸ್ವಗ್ರಾಮ ದೀಪಕುಂಟಕ್ಕೆ ತಂದ ಜಾನ್ಸಿ ತಾಯಿ ಮತ್ತು ಗಂಡ ಆಕೆ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾಳೆ ಎಂದು ಗ್ರಾಮಸ್ಥರಿಗೆ ಹೇಳಿದ್ದಾರೆ.

ಮೃತಳ ಪತ್ರ ಮೇ 28 ರಂದು ಪೊಲೀಸರ ಕೈಗೆ ಸಿಕ್ಕಿದೆ. ನಂತರ ಜಾನ್ಸಿ ತಾಯಿ ಪದ್ಮಾಳನ್ನು ವಿಚಾರಣೆಗೆ ಒಳಪಡಿಸಿದಾಗ ಜಾನ್ಸಿ ಸಾವಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿದ್ದಾಳೆ.

ವಿಜೆಯೇಂದರ್ ನಿಂದ 4 ಲಕ್ಷ ರುಯ ಸಾಲ ಪಡೆದಿದ್ದೆ. ಆತನ ಒತ್ತಾಯಕ್ಕೆ ಮಣಿದು ಜಾನ್ಸಿಯನ್ನು ವಿಜೇಯಂದರ್ ಗೆ ಕೊಟ್ಟು ವಿವಾಹಮಾಡಲಾಗಿತ್ತು.

ವಿಚ್ಛೇಧನ ನೀಡುವಂತೆ ಜಾನ್ಸಿ ವಿಜೆಯೇಂದರ್ ಗೆ ಕೇಳಿದ್ದಳು. ಅದಕ್ಕೆ 20 ಲಕ್ಷ ಹಣ ನೀಡುವಂತೆ ಪೀಡಿಸಿದ್ದ ಆತ ಜಾನ್ಸಿಯನ್ನು ವೇಶ್ಯಾವಾಟಿಕೆ ಮಾಡಿ ಹಣ ಸಂಪಾದಿಸುವಂತೆ ಕಿರುಕುಳ ನೀಡುತ್ತಿದ್ದ ಎಂದು ಪದ್ಮಾ ಪೊಲೀಸರಿಗೆ ತಿಳಿಸಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?