ದೇಶ

ಕನ್ಯತ್ವ ಪರೀಕ್ಷೆಯಲ್ಲಿ ಫೇಲಾದ ಪತ್ನಿಯಿಂದ ಡಿವೋರ್ಸ್ ಕೇಳಿದ ಪತಿ

Sumana Upadhyaya

ಮುಂಬೈ: ಕನ್ಯತ್ವ ಪರೀಕ್ಷೆಯಲ್ಲಿ ನವವಿವಾಹಿತೆ ಪತ್ನಿ ಫೈಲು ಆದಳು ಎಂದು ಆರೋಪಿಸಿ ಪತಿ ಮದುವೆಯಾದ 2 ದಿನದಲ್ಲೇ ವಿಚ್ಚೇದನಕ್ಕೆ ಮುಂದಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ವಿವಾಹಿತೆ ಕನ್ಯೆ ಅಲ್ಲ ಎಂದು ನಾಸಿಕ್ ಗ್ರಾಮದ ಜಾತಿ ಪಂಚಾಯ್ತಿ ಘೋಷಿಸಿದ ನಂತರ ವಿಚ್ಛೇದನ ನೀಡಲು ನಿರ್ಧರಿಸಿದ್ದಾನೆ.

ಮೇ 22ರಂದು ಮದುವೆಯಾದ ಹುಡುಗನಿಗೆ ಪಂಚಾಯ್ತಿ ಮುಖಂಡರು ಬಿಳಿ ಬಣ್ಣದ ಬೆಡ್ ಶೀಟ್ ನೀಡಿ, ಪ್ರಥಮ ರಾತ್ರಿ ನಂತರ ಅದನ್ನು ಹಿಂತಿರುಗಿಸುವಂತೆ ಸೂಚಿಸಿದ್ದರು. ರಕ್ತದ ಕಲೆ ಇಲ್ಲದ ಬೆಡ್ ಶೀಟನ್ನು ಮದುಮಗ ವಾಪಸ್ ನೀಡಿದ ಬಳಿಕ ಯುವತಿಗೆ ವಿಚ್ಛೇದನ ನೀಡುವಂತೆ ಪಂಚಾಯ್ತಿ ಆತನಿಗೆ ಸೂಚನೆ ನೀಡಿದೆ.

ಪೊಲೀಸ್ ಪಡೆಯ ನೇಮಕ ಪರೀಕ್ಷೆಗಾಗಿ ಕೆಲದಿನಗಳಿಂದ ಯುವತಿ ದೈಹಿಕ ಕಸರತ್ತು ನಡೆಸುತ್ತಿದ್ದಳು ಎಂದು ಸಾಮಾಜಿಕ ಕಾರ್ಯಕರ್ತ ರಂಜನ ಗಾವಂಡೆ ತಿಳಿಸಿದ್ದಾರೆ. ಸಮುದಾಯದ ಮುಖಂಡರ ಜತೆ ನಾಳೆ ಮಾತುಕತೆ ನಿಗದಿಯಾಗಿದ್ದು, ಎಲ್ಲರಿಗೂ ಒಪ್ಪಿಗೆಯಾಗದಂಥ ನಿರ್ಣಯಕ್ಕೆ ಬರದಿದ್ದರೆ ಈ ಸಂಬಂಧ ಪೊಲೀಸರ ಬಳಿ ದೂರು ದಾಖಲಿಸುವುದಾಗಿ ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ. ಇನ್ನು ಈ ಪ್ರಕರಣ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಮಹಿಳಾ ಆಯೋಗ ಒತ್ತಾಯಿಸಿದೆ.

SCROLL FOR NEXT