ದೇಶ

ದೇಶಾದ್ಯಂತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿ: ಪಾಸ್ವಾನ್

Lingaraj Badiger
ನವದೆಹಲಿ: ಕೇರಳ ಮತ್ತು ತಮಿಳುನಾಡು ಸೇರಿದಂತೆ ದೇಶಾದ್ಯಂತ ಇದೇ ತಿಂಗಳಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಯಾಗಿದೆ ಎಂದು ಕೇಂದ್ರ ಆಹಾರ ಮತ್ತ ನಾಗರಿಕ ಪೂರೈಕೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರು ಗುರುವಾರ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಸ್ವಾನ್ ಅವರು, ನಾವು ಅಧಿಕಾರಕ್ಕೆ ಬಂದಾಗ ಕೇವಲ 11 ರಾಜ್ಯಗಳಲ್ಲಿ ಮಾತ್ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಯಾಗಿತ್ತು. ಆದರೆ ಈಗ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲೂ ಜಾರಿಯಾಗಿದೆ. ಸುಮಾರು 80 ಕೋಟಿ ಜನರು ಪ್ರಸ್ತುತ ಕಾಯ್ದೆಯ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ವಾರ್ಷಿಕ 1.4 ಲಕ್ಷ ಕೋಟಿ ಸಹಾಯ ಧನ ನಿಗದಿಯಾಗಿದ್ದು, 2016–17ನೇ ಸಾಲಿನಲ್ಲಿ ರಾಜ್ಯ ಸರ್ಕಾರಗಳಿಗೆ ಈವರೆಗೆ ರು.1874 ಕೋಟಿ ಬಿಡುಗಡೆಯಾಗಿದೆ. ಕೇರಳ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ಮಾತ್ರ ಆಹಾರ ಭದ್ರತಾ ಕಾಯ್ದೆ ಅನುಷ್ಠಾನಗೊಂಡಿರಲಿಲ್ಲ. ಆದರೆ ಈ ತಿಂಗಳಿಂದ ಆ ರಾಜ್ಯಗಳಲ್ಲೂ ಜಾರಿಯಾಗಿದೆ ಎಂದರು.
ಆಹಾರ ಭದ್ರತಾ ಕಾಯಿದೆಯಡಿ ಫ‌ಲಾನುಭವಿಗಳು ಆಹಾರ ಧಾನ್ಯಗಳನ್ನು ಅತ್ಯದಿಕ ಸಹಾಯಧನದ ಬೆಂಬಲದಲ್ಲಿ ಅತೀ ಅಗ್ಗದ ದರಗಳಲ್ಲಿ ಪಡೆಯಬಹುದಾಗಿದೆ. ಈ ಯೋಜನೆಯಡಿ ದೇಶಾದ್ಯಂತ ಫ‌ಲಾನುಭವಿಗಳಿಗೆ 3 ರಪಾಯಿಗೆ ಕೇಜಿ ಅಕ್ಕಿ ಮತ್ತು 2 ರುಪಾಯಿಗೆ ಕೇಜಿ ಗೋಧಿ ಸಿಗಲಿದೆ. ಅಲ್ಲದೆ ಇತರ ಬಗೆಯ ದವಸ ಧಾನ್ಯಗಳು ಅಗ್ಗದ ಬೆಲೆಗೆ ಸಿಗಲಿದೆ ಎಂದು ಹೇಳಿದರು.
SCROLL FOR NEXT