ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಭೋಪಾಲ್ ಎನ್ ಕೌಂಟರ್: ಪೊಲೀಸರ ಸಂಭಾಷಣೆಯುಳ್ಳ ಆಡಿಯೊ ಕ್ಲಿಪ್ ಪತ್ತೆ

ಸಿಮಿ ಉಗ್ರರ ಎನ್ ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಮಧ್ಯ ಪ್ರದೇಶ ಸರ್ಕಾರ ವಹಿಸುವುದಕ್ಕೆ...

ಸಾಂದರ್ಭಿಕ ಚಿತ್ರ
Sumana Upadhyaya
Updated On : 4 Nov 2016, 12:25 pm
ಭೋಪಾಲ್: ಸಿಮಿ ಉಗ್ರರ ಎನ್ ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಮಧ್ಯ ಪ್ರದೇಶ ಸರ್ಕಾರ ವಹಿಸುವುದಕ್ಕೆ ಮುನ್ನ ಹೊಸ ಆಡಿಯೊ ಕ್ಲಿಪ್ ವೊಂದು ಸಿಕ್ಕಿದೆ.
ಆಡಿಯೊದಲ್ಲಿ ಪೊಲೀಸರು ಮತ್ತು ಪೊಲೀಸ್ ಕಂಟ್ರೋಲ್ ರೂಂನಲ್ಲಿದ್ದ ಅವರ ಮೇಲಾಧಿಕಾರಿಗಳ ನಡುವೆ ನಡೆದ ಸಂಭಾಷಣೆಯಿದೆ. ಎಂಟು ಮಂದಿ ಉಗ್ರರನ್ನು ಎನ್ ಕೌಂಟರ್ ನಲ್ಲಿ ಕೊಂದ ದಿನ ನಡೆದ ಸಂಭಾಷಣೆಯಾಗಿದೆ. 
ಆಡಿಯೊ ಕ್ಲಿಪ್ ನಲ್ಲಿ ಪೊಲೀಸರೊಬ್ಬರು ವಾಕಿ ಟಾಕಿಯಲ್ಲಿ ಇನ್ನೊಬ್ಬ ಪೊಲೀಸರ ಜೊತೆ ಅವರನ್ನು ಮುಗಿಸಿ ಎಂದು ಹೇಳುವ ಮತ್ತು ಆಗ ಇನ್ನೊಂದು ಬದಿಯಲ್ಲಿದ್ದ ಪೊಲೀಸ್ ಐವರನ್ನು ಕೊಂದು ಆಗಿದೆ ಎಂದು ಹೇಳುವ ಸಂಭಾಷಣೆ ರೆಕಾರ್ಡ್ ಆಗಿದೆ.

Advertisement

Advertisement

 ಇದಾಗಿ ಕೆಲವೇ ಹೊತ್ತಿನಲ್ಲಿ ಎಲ್ಲಾ ಎಂಟು ಮಂದಿ ಸಿಮಿ ಉಗ್ರರನ್ನು ಕೊಲ್ಲಲಾಗಿದೆ ಎಂಬ ಸುದ್ದಿ ಹೊರಬಿತ್ತು. ಇದಕ್ಕೆ ಚಪ್ಪಾಳೆಯ ಸುರಿಮಳೆ, ಪ್ರಶಂಸೆ ಕೇಳಬಂದಿದೆ. ಧನ್ಯವಾದಗಳು ಸರ್, ಎಲ್ಲಾ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಒಬ್ಬ ಪೊಲೀಸ್ ಹೇಳಿದರೆ, ಒಳ್ಳೆಯದು, ಒಳ್ಳೆಯದು, ಅವರಿಗೆ ಹೇಳಲಾಗಿತ್ತು, ನಾವಲ್ಲಿಗೆ ತಲುಪುತ್ತೇವೆ ಎಂಬ ಸಂಭಾಷಣೆಯಿದೆ.
ಈ ಆಡಿಯೊ ಕ್ಲಿಪ್ ಪತ್ತೆಯಾಗಿರುವುದು ಎನ್ ಕೌಂಟರ್ ಬಗ್ಗೆ ಸಾರ್ವಜನಿಕರಲ್ಲಿ ಇರುವ ಸಂದೇಹ, ಗೊಂದಲಗಳಿಗೆ ಪುಷ್ಟಿ ನೀಡುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement