ಪ್ರಕಾಶ್ ಕೇಳ್ಕರ್ 
ದೇಶ

ಜೀವನಪೂರ್ತಿ ಸಂಪಾದಿಸಿದ ಹಣವನ್ನು ರೈತರು, ಸಶಸ್ತ್ರ ಪಡೆಗೆ ದಾನ ನೀಡಿದ ವ್ಯಕ್ತಿ

ಜೀವಮಾನವಿಡಿ ಸಂಪಾದಿಸಿದ ತನ್ನ ಎಲ್ಲಾ ಹಣವನ್ನು 73 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಹಾಗೂ ಸೇನಾ ಪಡೆ ಕಲ್ಯಾಣಕ್ಕೆ ದಾನ ....

ಪುಣೆ: ಜೀವಮಾನವಿಡಿ ಸಂಪಾದಿಸಿದ ತನ್ನ ಎಲ್ಲಾ ಹಣವನ್ನು 73 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಹಾಗೂ ಸೇನಾ ಪಡೆ ಕಲ್ಯಾಣಕ್ಕೆ ದಾನ ನೀಡಿದ್ದಾರೆ.

ಪುಣೆಯ ನಿವೃತ್ತ ಹತ್ತಿ ಪರಿಣಿತ ಪ್ರಕಾಶ್ ಕೇಳ್ಕರ್ ತಾವು ಸಂಪಾದಿಸಿದ ಹಣದಲ್ಲಿ ಶೇ.30 ರಷ್ಟು ಭಾಗ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ, ಶೇ. 30 ರಷ್ಟು ಹಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಾಗೂ ಶೇ, 30 ರಷ್ಟು ಹಣ ಸಶಸ್ತ್ರ ಮೀಸಲು ಪಡೆಗೆ ಮತ್ತು ಉಳಿದ 10 ರಷ್ಟು ಹಣವನ್ನು ಒಳ್ಳೆಯ ಕೆಲಸ ಮಾಡುತ್ತಿರುವ ಎನ್ ಜಿಗೆ ನೀಡಿದ್ದಾರೆ.

ಹಲವು ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಹತ್ತಿ ಪರಿಣಿತರಾಗಿ ಕೆಲಸ ಮಾಡಿರುವ ಪ್ರಕಾಶ್ ಕೇಳ್ಕರ್,  ತನ್ನ ಎಲ್ಲಾ ಹಣವನ್ನು ಸೈನಿಕರ ಕಲ್ಯಾಣಕ್ಕೆ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ, ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೊಳಗಾದವಿರೆಗ ನೀಡಬೇಕು ಎಂಬ ಯೋಚನೆ 2013 ರಲ್ಲೇ ನನ್ನ ಮನಸ್ಸಿಗೆ ಬಂದಿತ್ತು ಎಂದು ಹೇಳಿದ್ದಾರೆ.

ನಾನು ಮತ್ತು ನನ್ನ ಪತ್ನಿ ದೀಪಾ ಸಂಪಾದಿಸಿದ ಹಣವನ್ನು ಜನ ಕಲ್ಯಾಣಕ್ಕೆ ನೀಡಬೇಕು ಎಂದು ನಿರ್ಧರಿಸಿ, ಪ್ರಧಾನ ಮಂತ್ರಿಗಳ ಕಾರ್ಯಾಲಯ, ಹಣಕಾಸು ಸಚಿವಾಲಯವನ್ನ ಸಂಪರ್ಕಿಸಿದ್ದೆವು,ನಮ್ಮ ಹಣವನ್ನು ಜನ ಕಲ್ಯಾಣಕ್ಕೆ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಸಹಾಯ ಮಾಡಿತು ಎಂದು ಹೇಳಿದ್ದಾರೆ. ತಮ್ಮ ಹಣವನ್ನು ನೀಡಲು ತಮ್ಮ ಇಬ್ಬರು ಹೆಣ್ಣು ಮಕ್ಕಳು ಒಪ್ಪಿದ್ದಾರೆ ಎಂದು ಹೇಳಿರುವ ಅವರು , ಕಳೆದ ವರ್ಷ ರಾಜ್ಯಾದ್ಯಂತ ಆತ್ಮಹತ್ಯೆ ಮಾಡಿಕೊಂಡ 40 ರೈತರ ವಿಧವಾ ಪತ್ನಿಯರಿಗೆ ಸಹಾಯ ಮಾಡಿದ್ದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್