ಲಖನೌ: ಸಮಾಜವಾದಿ ಪಕ್ಷದೊಳಗಿನ ವಾಕ್ಸಮರ ಮುಂದುವರೆದಿದ್ದು, ನನ್ನನ್ನು ಪಕ್ಷದಿಂದ ವಜಾಗಳಿಸಿದರು ಅಥವಾ ಅವಮಾನಿಸಿದರೂ ಪರವಾಗಿಲ್ಲ ನಾನು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಅವರು ಪರೋಕ್ಷವಾಗಿ ತಮ್ಮ ಸಂಬಂಧಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಪಾಲ್ ಯಾದವ್ ಅವರು, ಕೆಲವು ಜನಕ್ಕೆ ತಾವು ಏನೂ ಮಾಡದಿದ್ದರೂ ಅಧಿಕಾರ ಬೇಕು, ಇನ್ನೂ ಕೆಲವರು ಪಕ್ಷಕ್ಕಾಗಿ ಏನೆಲ್ಲಾ ತ್ಯಾಗ ಮಾಡಿದರೂ ಅವರಿಗೆ ಏನೂ ಸಿಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ತಮಗೆ ಮುಖ್ಯಮಂತ್ರಿಯಾಗುವ ಬಯಕೆ ಇಲ್ಲ ಎಂದು ಸ್ಪಷ್ಟಪಡಿಸಿದ ಶಿವಪಾಲ್ ಯಾದವ್ ಅವರು, ಅಖಿಲೇಶ್ ಅವರು ನನ್ನನ್ನು ಪಕ್ಷದಿಂದ ಉಚ್ಚಾಟಿಸಲಿ, ಅವಮಾನ ಮಾಡಲಿ. ಆದರೆ ಪಕ್ಷಕ್ಕಾಗಿ ನಾನು ರಕ್ತ ಕೊಡಲ ಸಿದ್ಧನಿದ್ದೇನೆ. ಹೀಗಾಗಿಯೇ ಕಳೆದ ನಾಲ್ಕು ವರ್ಷಗಳಲ್ಲಿ ಒಬ್ಬ ಸಚಿವನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದರು.
'ಜನಪ್ರಿಯ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ನಾನು ನಿನಗಾಗಿ ಯಾವ ತ್ಯಾಗಕ್ಕೂ ಸಿದ್ಧ. ನಾನು ಮುಖ್ಯಮಂತ್ರಿಯಾಗಬೇಕು ಎಂದು ಯಾವತ್ತೂ ಬಯಸಿಲ್ಲ' ಎಂದು ಸ್ಪಷ್ಟಪಡಿಸಿದರು,
ಒಬ್ಬ ಮುಖ್ಯಮಂತ್ರಿಯಾಗಿ ನೀನು ಉತ್ತಮ ಕೆಲಸ ಮಾಡಿದ್ದೀಯಾ. ಅದೇ ರೀತಿ ನಾನು ಸಹ ಒಬ್ಬ ಸಚಿವನಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದೇನೆ. ಲೋಕೋಪಯೋಗಿ, ನೀರಾವರಿ, ಕಂದಾಯ, ಸಹಕಾರ ಹಾಗೂ ಇತರೆ ಇಲಾಖೆಗಳಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನೀನು ಪರಿಶೀಲಿಸಬಹುದು ಎಂದು ಶಿವಪಾಲ್ ಯಾದವ್ ಅವರು ಅಖಿಲೇಶ್ ಗೆ ಹೇಳಿದ್ದಾರೆ.
ಉತ್ತರ ಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷ ಇಂದು ಜೆಡಿಯು, ಆರ್ ಜೆಡಿ ಮತ್ತು ರಾಷ್ಟ್ರೀಯ ಲೋಕ ದಳ ಪಕ್ಷಗಳ ನಾಯಕರೊಂದಿಗೆ ತನ್ನ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics