ದೇಶ

ದೆಹಲಿಯಲ್ಲಿ ಮಿತಿಮೀರಿದ ಮಾಲಿನ್ಯ, ಶಾಲೆಗಳಿಗೆ 3 ದಿನ ರಜೆ, ಮತ್ತೆ ಸಮ-ಬೆಸ ಜಾರಿ ಸಾಧ್ಯತೆ

Lingaraj Badiger
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಮು ಮಾಲಿನ್ಯ ಮಿತಿಮೀರಿದ್ದು, ಜನರು ಉಸಿರಾಡಲೂ ಕಷ್ಟಪಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಕೆಲವು ತುರ್ತು ಕ್ರಮಗಳನ್ನು ಘೋಷಿಸಿದ್ದಾರೆ.
ಈ ಸಂಬಂಧ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವ ಮೂಲಕ ಮಾಲಿನ್ಯ ವಿಷಯವನ್ನು ರಾಜಕೀಯ ಮಾಡುವುದು ಬೇಡ. ಬದಲಾಗಿ ಮಾಲಿನ್ಯ ನಿಯಂತ್ರಿಸಲು ಒಗ್ಗಟ್ಟಾಗಿ ಕೆಲಸ ಮಾಡುವ ಮತ್ತು ಕೆಲವು ತುರ್ತು ಕ್ರಮಗಳ ಅಗತ್ಯ ಇದೆ ಎಂದರು.
ದೆಹಲಿ ಸಿಎಂ ಘೋಷಿಸಿದ ಕೆಲವು ತುರ್ತು ಕ್ರಮಗಳು
ಮುಂದಿನ ಮೂರು ದಿನಗಳ ಕಾಲ ಶಾಲಾ, ಕಾಲೇಜ್ ಗಳಿಗೆ ರಜೆ
ಮುಂದಿನ ಐದು ದಿನಗಳವರೆಗೆ ಎಲ್ಲಾ ಕಟ್ಟಡ ನಿರ್ಮಾಣ ಮತ್ತು ತೆರವು ಮಾಡುವಂತಿಲ್ಲ
ಮುಂದಿನ 10 ದಿನಗಳ ಕಾಲ ಆಸ್ಪತ್ರೆ ಮತ್ತು ತುರ್ತು ಸ್ಥಳಗಳ ಹೊರತುಪಡಿಸಿ ಇತರೆ ಕಡೆ ಡೀಸೆಲ್ ಜನರೇಟರ್ ನಿಷೇಧ
ಬದ್ರಾಪುರ ವಿದ್ಯುತ್  ಸ್ಥಾವರ 10 ದಿನಗಳ ಕಾಲ ಬಂದ್
10 ದಿನಗಳ ಕಾಲ ಬೂದಿ ಸಾಗಾಟ ನಿಷೇಧ
ಸಮ-ಬೆಸ ಸಂಚಾರ ನಿಯಮ ಶೀಘ್ರ ಜಾರಿ
ನವೆಂಬರ್ 10ರಿಂದ ದೆಹಲಿ ರಸ್ತೆಗಳ ನಿರ್ವಾತ ಶುದ್ಧೀಕರಣ ಪ್ರಾರಂಭ
ತುರ್ತು ಸಭೆ ಕರೆದ ಲೆಫ್ಟಿನೆಂಟ್ ಗವರ್ನರ್
ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಇಂದು ತುರ್ತು ಸಭೆ ಕರೆದಿದ್ದಾರೆ. ಅಲ್ಲದೆ ನಾಳೆ ದೆಹಲಿ ಸುತ್ತಲಿನ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಸಚಿವರ ಸಭೆ ಕರೆದಿದ್ದಾರೆ.
SCROLL FOR NEXT