ಕಾಶ್ಮೀರದಲ್ಲಿ ಶಾಲೆಗಳಿಗೆ ಬೆಂಕಿ(ಸಂಗ್ರಹ ಚಿತ್ರ)
ರಜೌರಿ: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು, ಉಗ್ರರು ಶಾಲೆಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಶಾಲೆ ನಮಗೆ ಮಸೀದಿ, ದೇವಾಲಯವಿದ್ದಂತೆ ಎಂದು ಹೇಳಿದ್ದಾರೆ.
ನಮಗೆ ಶಾಲೆ ದೇವಾಲಯ ಮಸೀದಿ ಇದ್ದಂತೆ, ಆದ್ದರಿಂದ ಶಾಲೆಗಳಿಗೆ ಭದ್ರತೆ ಹೆಚ್ಚಿಸಬೇಕು ಎಂದು ವಿದ್ಯಾರ್ಥಿಯೊಬ್ಬ ಕೇಳಿದ್ದು, ಶಾಲೆಗಳಿಗೆ ಬೆಂಕಿ ಹಚ್ಚುವುದು ತಪ್ಪು, ಅಂತಹ ಕೃತ್ಯಗಳನ್ನು ಕೂಡಲೆ ನಿಲ್ಲಿಸಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಉತ್ತಮ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ಪಡೆಯಲು ಶಾಲೆ ಮೇಲೆ ಅವಲಂಬಿತರಾಗಿರುತ್ತಾನೆ ಆದ್ದರಿಂದ ಶಾಲೆ ಎಂದರೆ ನಮಗೆ ಮಸೀದಿ, ದೇವಾಲಯಗಳಿಗಿಂತಲೂ ಪವಿತ್ರವಾದದ್ದು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
"ಕಾಶ್ಮೀರದಲ್ಲಿ ಐಎಎಸ್ ಸೇರಿದಂತೆ ಹಲವು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಗಳಲ್ಲಿ ತೇರ್ಗಡೆಯಾದವರಿದ್ದಾರೆ. ಶಾಲೆಗಳಿಗೆ ಬೆಂಕಿ ಹಚ್ಚುವುದರಿಂದ ಕಣಿವೆಯ ಅಭಿವೃದ್ಧಿಯನ್ನು ಹಳಿ ತಪ್ಪಿಸಿದಂತಾಗುತ್ತದೆ. ಮೂರು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆಯೇ ಸ್ಥಗಿತಗೊಂಡಿದೆ. ಶಾಲೆಗಳಿಗೆ ಬೆಂಕಿ ಹಚ್ಚುವುದನ್ನು ಪ್ರತಿಭಟನೆಯ ಹೊಸ ಅಸ್ತ್ರವಾಗಿರಿಸಿಕೊಂಡಿರುವುದು ದುರದೃಷ್ಟಕರ ಎಂದು ಸ್ಥಳೀಯ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ".