ನರೇಂದ್ರ ಮೋದಿ- ಥೆರೆಸಾ ಮೇ ಜಂಟಿ ಸುದ್ದಿಗೋಷ್ಠಿ 
ದೇಶ

ವಿಜಯ್ ಮಲ್ಯ, ಲಲಿತ್ ಮೋದಿ, ಕ್ರಿಶ್ಚಿಯನ್ ಮೈಕೆಲ್ ನ್ನು ವಶಕ್ಕೆ ಒಪ್ಪಿಸಿ: ಬ್ರಿಟನ್ ಗೆ ಭಾರತ

ಭಾರತಕ್ಕೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿ ಬ್ರಿಟನ್ ನಲ್ಲಿ ಆಶ್ರಯ ಪಡೆದಿರುವ ಆರೋಪಿಗಳಾದ ವಿಜಯ್ ಮಲ್ಯ, ಲಲಿತ್ ಮೋದಿ, ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮೈಕೆಲ್ ನನ್ನು ವಶಕ್ಕೆ ಒಪ್ಪಿಸಿ ಎಂದು ಹೇಳಿದ್ದಾರೆ.

ನವದೆಹಲಿ: ಬ್ರಿಟನ್ ಪ್ರಧಾನಿಯಾದ ಬಳಿಕ ಮೊದಲ ವಿದೇಶ ಪ್ರವಾಸವನ್ನು ಭಾರತಕ್ಕೆ ಕೈಗೊಂಡಿರುವ ಥೆರೆಸಾ ಮೇ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಭಾರತಕ್ಕೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿ ಬ್ರಿಟನ್ ನಲ್ಲಿ ಆಶ್ರಯ ಪಡೆದಿರುವ ಆರೋಪಿಗಳಾದ ವಿಜಯ್ ಮಲ್ಯ, ಲಲಿತ್ ಮೋದಿ, ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮೈಕೆಲ್ ನನ್ನು ವಶಕ್ಕೆ ಒಪ್ಪಿಸಿ ಎಂದು ಹೇಳಿದ್ದಾರೆ. 
ಪರಸ್ಪರರ ದೇಶಗಳ ವಶಕ್ಕೆ ಬೇಕಾಗಿರುವ ಆರೋಪಿಗಳ ಪಟ್ಟಿಯನ್ನು ಉಭಯ ದೇಶಗಳೂ ಹಂಚಿಕೊಂಡಿದ್ದು, ಈ ಪೈಕಿ ವಿಜಯ್ ಮಲ್ಯ, ಲಲಿತ್ ಮೋದಿ, ಮೈಕೆಲ್ ಹೆಸರುಗಳಿದ್ದು, ಶೀಘ್ರದಲ್ಲೇ ಭಾರತೀಯ ನ್ಯಾಯಾಂಗವನ್ನು  ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ಪರಾರಿಯಾಗಿರುವ ಭ್ರಷ್ಟರು ಮತ್ತು ಅಪರಾಧಿಗಳಿಗೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದೆಂಬ ನಿರ್ಧಾರವನ್ನು ಉಭಯ ದೇಶಗಳೂ ಪ್ರಕಟಿಸಿದ್ದು, ಅಪರಾಧಿಗಳನ್ನು ಗಡಿಪಾರು ಮಾಡಲು ಒಪ್ಪಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ, ಥೆರೆಸಾ ಮೇ ಮಾತುಕತೆಯ ವೇಳೆ ಭಯೋತ್ಪಾದನೆ, ಸಂಘಟಿತ ಅಪರಾಧ, ವೀಸಾ ವಲಸೆ ಸಂಬಂಧ ಭಾರತ ಹಾಗೂ ಬ್ರಿಟನ್ ಗೃಹ ಸಚಿವಾಲಯದ ಮಟ್ಟದಲ್ಲಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದು, ಇದರ ಪ್ರಕಾರ ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ, ಲಲಿತ್ ಮೋದಿ, ಕ್ರಿಶ್ಚಿಯನ್ ಮೈಕೆಲ್ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ 60 ಮಂದಿಯನ್ನು ಬ್ರಿಟನ್ ನಿಂದ ಗಡಿಪಾರು ಮಾಡುವಂತೆ ಭಾರತ ಮನವಿ ಸಲ್ಲಿಸಿದೆ. ಇದೇ ವೇಳೆ ಬ್ರಿತಾನ್ ಕೂಡ ಭಾರತದಲ್ಲಿರುವ ತನ್ನ ದೇಶದ 17 ಮಂದಿಯನ್ನು ಗಡಿಪಾರು ಮಾಡುವಂತೆ ಭಾರತಕ್ಕೆ ಮನವಿ ಮಾಡಿದೆ. 
ದ್ವಿಪಕ್ಶೀಯ ಮಾತುಕತೆಯ ಭಾಗವಾಗಿ ಭಾರತ- ಬ್ರಿಟನ್ 83000  ಕೋಟಿ ರೂ ಮೊತ್ತದ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿವೆ. ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಥೆರೆಸಾ ಮೇ ನ.8ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

ಮಾಜಿ ಸಂಸದ ಪ್ರತಾಪ್ ಸಿಂಹಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು ಅರ್ಜಿ ವಜಾ

ದಕ್ಷಿಣ ಕನ್ನಡ ಜಿಲ್ಲೆಗೆ 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣದ ಪ್ರಸ್ತಾವನೆ: ಸಾರ್ವಜನಿಕರಿಂದ ಆಕ್ಷೇಪಣೆಗೆ ಆಹ್ವಾನ

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"