ನವದೆಹಲಿ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಕೇಂದ್ರ ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಕಿಡಿ ಕಾರಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ರಾಹುಲ್ ಮಾತು ಕೇಳುತ್ತಿದ್ದರೇ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
1975 ರಲ್ಲಿ ಕಾಂಗ್ರೆಸ್ ಸರ್ಕಾರ ತುರ್ತಪ ಪರಿಸ್ಥಿತಿ ಜಾರಿಗೆ ತಂದು ದೇಶಕ್ಕಾಗಿ ಏನು ಮಾಡಿತು ಎಂಬುದನ್ನು ನೆನಪಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎನ್ ಡಿ ಟಿವಿ ಇಂಡಿಯಾ ಚಾನೆಲ್ ಮೇಲೆ ಒಂದು ನಿಷೇಧ ಹೇರಿದ್ದಕ್ಕೆ ರಾಹುಲ್ ಗಾಂಧಿ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ 21 ಚಾನೆಲ್ ಗಳನ್ನು ನಿಷೇಧಿಸಿರುವುದು ಮರೆತು ಹೋಯಿುತೆ ಎಂದು ಪ್ರಶ್ನಿಸಿದ್ದಾರೆ.