ದೇಶ

ಉ.ಪ್ರದೇಶದಲ್ಲಿ 500 ಹಾಗೂ 1000 ರು.ನೋಟ್ ಸುಟ್ಟು ಹಾಕಿರುವುದು ಪತ್ತೆ

Lingaraj Badiger
ಲಖನೌ: ಕೇಂದ್ರ ಸರ್ಕಾರ ಮಧ್ಯರಾತ್ರಿಯಿಂದ 500 ಹಾಗೂ 1000 ರುಪಾಯಿ ನೋಟಿ ನಿಷೇಧಿಸಿದ ಬೆನ್ನಲ್ಲೇ ಉತ್ತರ ಪ್ರದೇಶದ ಬರೇಲಿಯಲ್ಲಿ 500 ಹಾಗೂ 1000 ರುಪಾಯಿ ನೋಟಿ ಕಂತೆಗಳನ್ನು ಸುಟ್ಟುಹಾಕಿರುವುದು ಪತ್ತೆಯಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಕಂಪನಿಯೊಂದರ ಕೆಲಸಗಾರರು ಚಲಾವಣೆಯಲ್ಲಿದ್ದ 500 ಹಾಗೂ 1000 ರುಪಾಯಿಯ ನೋಟ್ ಗಳನ್ನು ಒಂದು ಮೂಟೆಯಲ್ಲಿ ತಂದು ಸಿಬಿ ಗಂಜ್ ನ ಪರ್ಸಖೇಡ ರಸ್ತೆಯಲ್ಲಿ ಸುಟ್ಟು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ತನಿಖೆಯಲ್ಲಿ ನೋಟುಗಳನ್ನು ಹರಿದುಹಾಕಿ ಬಳಿಕ ಬೆಂಕಿ ಹಚ್ಚಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳದಲ್ಲಿದ್ದ ನೋಟಿನ ಅವಶೇಷಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಘಟನೆಯ ಬಗ್ಗೆ ಆರ್ ಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ ನೋಟುಗಳ ಹಾವಳಿ ತಡೆಯುವುದಕ್ಕಾಗಿ ಮಧ್ಯರಾತ್ರಿಯಿಂದಲೇ 500 ಹಾಗೂ 1000 ರುಪಾಯಿ ನೋಟ್ ಗಳಿಗೆ ನಿಷೇಧ ಹೇರಿದ್ದಾರೆ. 
SCROLL FOR NEXT