ದೇಶ

ಕಪ್ಪು ಹಣದ ಮೇಲಿನ ಸೀಮಿತ ದಾಳಿಯಿಂದ ಸಾಮಾನ್ಯ ಜನರು ಸುರಕ್ಷಿತ: ಕೇಂದ್ರ ಸರ್ಕಾರ

Manjula VN

ನವದೆಹಲಿ: ರು.500 ಹಾಗೂ 1,000 ನೋಟ್ ಬಂದ್ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಕಪ್ಪು ಹಣದ ವಿರುದ್ಧದ ಸೀಮಿತ ದಾಳಿಯಿಂದ ಸಾಮಾನ್ಯ ಜನರು ಸುರಕ್ಷಿತವಾಗಿರಲಿದ್ದಾರೆಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್ ಅವರು, ಪ್ರಧಾನಿ ಮೋದಿಯವರ ನಿರ್ಧಾರ ಭ್ರಷ್ಟರು ಹಾಗೂ ಕಪ್ಪು ಹಣವನ್ನು ಹೊಂದಿರುವವರ ಮೇಲೆ ಪರಿಣಾಮವನ್ನು ಬೀರಲಿದೆ. ಮೋದಿಯವರ ಈ ನಿರ್ಧಾರದಿಂದ ಆರ್ಥಿಕ ವಲಯದಲ್ಲಿ ದೊಡ್ಡ ಬೆಳವಣಿಗೆಗಳೇ ಕಂಡು ಬರಲಿದೆ. ಭ್ರಷ್ಟರ ವಿರುದ್ಧ ನಾವು ಕ್ರಮಕೈಗೊಳ್ಳಲಿದ್ದೇವೆಂದು ಹೇಳಿದ್ದಾರೆ.

ದೇಶದಲ್ಲಿರುವ ಭ್ರಷ್ಟಚಾರವೆಂಬ ಕ್ಯಾನ್ಸರ್ ಇದೀಗ ನಿವಾರಣೆಯಾಗದಲಿದೆ. ಪ್ರತೀಯೊಂದು ಹಣಕ್ಕೂ ಇಂದು ತೆರಿಗೆ ಕಟ್ಟಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿಯೇ ಪ್ರಧಾನಿ ಮೋದಿಯವರ ಈ ಹೆಜ್ಜೆಯನ್ನು ಐತಿಹಾಸಿಕ ಹಾಗೂ ಕ್ರಾಂತಿಕಾರಿ ತೀರ್ಮಾನವೆಂದು ಹೇಳಲಾಗುತ್ತಿದೆ. ಸಾಮಾನ್ಯ ಜನರ ಬಳಿಯಷ್ಟೇ ವೈಟ್ ಮನಿ ಇರುತ್ತದೆ. ಕೆಲ ಬೆಳವಣಿಗೆಗಳಿಂದಾಗಿ ಸಣ್ಣ ವ್ಯಾಪಾರಿಗಳ, ಮದುವೆ ಸಮಾರಂಭ ನಡೆಸುತ್ತಿರುವವರ ಮೇಲೆ ಪರಿಣಾಮ ಬೀರಲಿದೆ. ಕಾಲ ಕಳೆಯುತ್ತಿದ್ದಂತೆ ಎಲ್ಲವೂ ಸರಿಹೋಗಲಿದೆ ಎಂದಿದ್ದಾರೆ.

SCROLL FOR NEXT