500, 100 ರೂ ನೋಟು ರದ್ದತಿ: ತಿರುಪತಿ ದೇವಾಲಯದಲ್ಲಿ ಡೆಬಿಟ್ ಕಾರ್ಡ್ ಮಷಿನ್ ಬಳಕೆ
ಹೈದರಾಬಾದ್: 500, 1000 ರೂ ನೋಟು ರದ್ದತಿಯಾಗಿರುವ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ದೇವಾಲಯಗಳಲ್ಲೂ ಸಹ ಭಕ್ತಾದಿಗಳಿಂದ 500,1000 ರೂ ನೋಟುಗಳನ್ನು ಸ್ವೀಕರಿಸಲಾಗುತ್ತಿಲ್ಲ.
ರದ್ದುಗೊಂಡಿರುವ ಮುಖಬೆಲೆಯ ನೋಟುಗಳನ್ನು ಹುಂಡಿಗೆ ಹಾಕದಂತೆ ಭಕ್ತಾದಿಗಳಿಗೆ ಬೃಂದಾವನದಲ್ಲಿ ಸೂಚನೆ ನೀಡಲಾಗಿದ್ದರೆ, ತಿರುಪತಿಯಲ್ಲಿ ಮಾತ್ರ ಎಲ್ಲಾ ನೋಟುಗಳನ್ನು ಸ್ವೀಕರಿಸಲಾಗುತ್ತಿದೆ. ಆದರೆ ಭಕ್ತಾದಿಗಳಿಗೆ ಪ್ರಸಾದ ಮತ್ತು ಟಿಕೆಟ್ ಗಳನ್ನು ನೀಡಲು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಯಾತ್ರಾರ್ಥಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.
ಬೃಂದಾವನದಲ್ಲಿ 500, 1000 ರೂ ನೋಟುಗಳನ್ನು ಹುಂಡಿಯಲ್ಲಿ ಹಾಕದಂತೆ ಭಕ್ತಾದಿಗಳಿಗೆ ಸೂಚಿಸಿ ಬ್ಯಾನರ್ ನ್ನು ಹಾಕಲು ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಚಿಂತನೆ ನಡೆಸಿದ್ದು ಬ್ಯಾನರ್ ಗಳಿಗಾಗಿ ಈಗಾಗಲೇ ಆರ್ಡರ್ ನೀಡಿರುವುದಾಗಿ ಟ್ರಸ್ಟ್ ನ ಕಾರ್ಯದರ್ಶಿ ಕಪಿಲ್ ಶರ್ಮಾ ತಿಳಿಸಿದ್ದಾರೆ.
ಇನ್ನು 500, 1000 ರೂ ನೋಟುಗಳನ್ನು ಪಡೆಯಲು ನಿರಾಕರಿಸಿದ ಟಿಟಿಡಿ ವಿರುದ್ಧ ಭಕ್ತಾದಿಗಳು ಕೆಲ ಸಮಯ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಭಕ್ತಾದಿಗಳಿಗೆ ಪ್ರಸಾದ ಮತ್ತು ಟಿಕೆಟ್ ಗಳನ್ನು ನೀಡಲು ನಾವು 500, 1000 ರೂ ನೋಟುಗಳನ್ನು ಸ್ವೀಕರಿಸುತ್ತಿದ್ದೇವೆ. ಇದು ಕೇಂದ್ರ ಸರ್ಕಾರದ ಗಡುವು ಮುಕ್ತಾಯಗೊಳ್ಳುವವರೆಗೂ ಮುಂದುವರೆಯಲಿದೆ ಎಂದು ಟಿಟಿಡಿ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದ್ದಾರೆ.