ದೇಶದ ಮೊದಲ ಬ್ಯಾಂಕಿಂಗ್ ರೊಬೋಟ್ ಲಕ್ಷ್ಮಿ
ಚೆನ್ನೈ: ದೇಶದ ಮೊದಲ ಬ್ಯಾಂಕಿಂಗ್ ರೋಬೋಟ್ ಲಕ್ಷ್ಮಿ ಚೆನ್ನೈ ನಲ್ಲಿ ಕಾರ್ಯಾರಂಭ ಮಾಡಿದೆ. ಚೆನ್ನೈ ನ ಸಿಟಿ ಯೂನಿಯನ್ ಬ್ಯಾಂಕ್ ಕೃತಕ ಬುದ್ಧಿಮತ್ತೆ ಹೊಂದಿರುವ ರೊಬೋಟ್ ಮೂಲಕ ಗ್ರಾಹಕರಿಗೆ ಹಲವು ಮಾಹಿತಿಯನ್ನು ನೀಡುವ ಪ್ರಯೊಗಕ್ಕೆ ಮುಂದಾಗಿದೆ.
ಹೆಚ್ ಡಿಎಫ್ ಸಿ ಬ್ಯಾಂಕ್ ಬ್ಯಾಂಕಿಂಗ್ ರೊಬೋಟ್ ಬಳಕೆ ಮಾಡುವ ಸಿದ್ಧತೆ ನಡೆಸಿದೆ. ಈ ಬೆನ್ನಲ್ಲೇ ಸಿಟಿಯೂನಿಯನ್ ಬ್ಯಾಂಕ್ ಬ್ಯಾಂಕಿಂಗ್ ರೊಬೋಟ್ ನ್ನು ಬಳಕೆ ಮಾಡಲು ಪ್ರಾರಂಭಿಸಿದೆ. ಬ್ಯಾಂಕಿಂಗ್ ರೊಬೋಟ್ ಲಕ್ಷ್ಮಿ ತನ್ನ ಬಳಿ ಮಾಹಿತಿ ಕೇಳುವ ಗ್ರಾಹಕರಿಗೆ ಖಾತೆಯಲ್ಲಿರುವ ಮೊತ್ತ, ಬಡ್ಡಿ ದರ, ಗೃಹ ಸಾಲ, ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ಸ್ ಸೇರಿದಂತೆ ಒಟ್ಟು 125 ವಿಷಯಗಳ ಬಗ್ಗೆ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ.
ಗ್ರಾಹಕರು ಖಾತೆಯ ವಿವರ ಹಾಗೂ ವಹಿವಾಟುಗಳ ವಿವರಗಳನ್ನು ರೋಬೋಟ್ ಮೇಲಿರುವ ಪರದೆಯ ಮೂಲಕ ಪಡೆಯಬಹುದಾಗಿದೆ ಎಂದು ಸಿಟಿ ಯೂನಿಯನ್ ಬ್ಯಾಂಕ್ ನ ಎಂಡಿ, ಸಿಇಒ ತಿಳಿಸಿದ್ದಾರೆ.
ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ರೊಬೋಟ್ ಧ್ವನಿ ಮೂಲಕ ತಿಳಿಸುವುದಿಲ್ಲ, ಬದಲಾಗಿ ಪರದೆ ಮೂಲಕ ಪ್ರದರ್ಶಿಸುತ್ತದೆ. ಕೃತಕ ಬುದ್ಧಿಮತ್ತೆ ಹೊಂದಿರುವ ಬ್ಯಾಂಕಿಂಗ್ ರೊಬೋಟ್ ಲಕ್ಷ್ಮಿ ಗ್ರಹಕರೊಂದಿಗೆ ಇಂಗ್ಲೀಷ್ ನಲ್ಲಿ ಸಂವಹನ ನಡೆಸಲಿದ್ದು, ಗ್ರಾಹಕರೊಂದಿಗೆ ನಿರಂತರ ಸಂವಹನ ನಡೆಉವ ಮೂಲಕ ತನ್ನ ಸಂವಹನ ಕಲೆಯನ್ನು ಸಹ ಹೆಚ್ಚಿಸಿಕೊಳ್ಳಲಿದೆ ಎಂದು ಬ್ಯಾಂಕ್ ನ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ಗ್ರಾಹಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಗದೇ ಇದ್ದರೆ ಅದನ್ನು ಬ್ಯಾಂಕ್ ಮ್ಯಾನೇಜರ್ ಬಳಿ ಕೇಳುವಂತೆ ರೋಬೋಟ್ ಸಲಹೆ ನೀಡುತ್ತದೆ. ಬ್ಯಾಂಕಿಂಗ್ ರೋಬೋಟ್ ಉತ್ತರಿಸಲು ಸಾಧ್ಯವಾಗದ ಪ್ರಶ್ನೆಗಳನ್ನು ನಾವು ಸಂಗ್ರಹಿಸುತ್ತಿರುತ್ತೇವೆ, ನಂತರ ಆ ಪ್ರಶ್ನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ರೊಬೋತ್ ಗೆ ಅಪ್ ಡೇಟ್ ಮಾಡುತ್ತೇವೆ ಎಂದು ಬ್ಯಾಂಕ್ ನ ಅಧಿಕಾರಿಗಳು ಹೇಳಿದ್ದಾರೆ.