ವಾರಂಗಲ್: ತೆಲಂಗಾಣದ ವಾರಂಗಲ್ ನ ಕೇಂದ್ರ ಕಾರಾಗೃಹದಿಂದ ಶನಿವಾರ ಬೆಳಗಿನ ಜಾವ ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೈದಿಗಳಾದ ರಾಜೇಶ್ ಯಾದವ್ ಮತ್ತು ಸಯಿಂಕ್ ಸಿಂಗ್ ಎಂಬುವವರು ಇಂದು ಬೆಳಗ್ಗೆ ಬೆಡ್ ಸೀಟ್ ನ್ನು ರೋಪ್ ನಂತೆ ಬಳಸಿ ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಡಿಐಜಿ ಕೇಶವ್ ನಾಯ್ಡು ಅವರು ಹೇಳಿದ್ದಾರೆ
ಈ ಇಬ್ಬರು ಕೈದಿಗಳು ಬಿಹಾರ ಮೂಲದವರಾಗಿದ್ದು, ಯಾದವ್ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ಮತ್ತೊಬ್ಬ ಕೈದಿ ಸಿಂಗ್ ಸೈನಿಕ ಕೋರ್ಟ್ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಂದು ಅವರು ತಿಳಿಸಿದ್ದಾರೆ.
ಎರಡು ತಿಂಗಳ ಇಂದಷ್ಟೇ ಈ ಇಬ್ಬರು ಕೈದಿಗಳನ್ನು ಹೈದರಾಬಾದ್ ನ ಚೆರ್ಲಪಲ್ಲಿ ಜೈಲ್ ನಿಂದ ವಾರಂಗಲ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಪರಾರಿಯಾಗಿರುವ ಕೈದಿಗಳಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.