ನೋಟುಗಳ ಬದಲಾವಣೆ: ಕ್ಯಾಶ್ ಇಲ್ಲ ಎಂದಿದ್ದಕ್ಕೆ ಗೇಟ್ ಬೀಗ ಮುರಿದು ಬ್ಯಾಂಗ್ ಗೆ ನುಗ್ಗಿ ಪ್ರತಿಭಟನೆ 
ದೇಶ

ನೋಟುಗಳ ಬದಲಾವಣೆ: ಕ್ಯಾಶ್ ಇಲ್ಲ ಎಂದಿದ್ದಕ್ಕೆ ಗೇಟ್ ಬೀಗ ಮುರಿದು ಬ್ಯಾಂಕ್ ಗೆ ನುಗ್ಗಿ ಪ್ರತಿಭಟನೆ

500, 1000 ರೂ ನೋಟುಗಳು ಬಂದ್ ಆಗಿದ್ದು, ಹೊಸ ನೋಟುಗಳು ಸಿಗದೇ ಪರದಾಡುತ್ತಿರುವ ಜನರ ಆಕ್ರೋಶ ಹೆಚ್ಚಿದೆ.

ಪಾಟ್ನಾ: 500, 1000 ರೂ ನೋಟುಗಳು ಬಂದ್ ಆಗಿದ್ದು, ಹೊಸ ನೋಟುಗಳು ಸಿಗದೇ ಪರದಾಡುತ್ತಿರುವ ಜನರ ಆಕ್ರೋಶ ಹೆಚ್ಚಿದೆ. ಇದಕ್ಕೆ ಉತ್ತಮ ಉದಾಹರಣೆಯಾಗಬಲ್ಲ ಘಟನೆ ಬಿಹಾರದಲ್ಲಿ ನಡೆದಿದ್ದು, ಒಂದಷ್ಟು ಜನರ ಗುಂಪು ಬ್ಯಾಂಕ್ ಗೇಟ್ ಗೆ ಹಾಕಲಾಗಿದ್ದ ಬೀಗ ಮುರಿದು ಬ್ಯಾಂಕ್ ಒಳಗೆ ನುಗ್ಗಿದ್ದಾರೆ. 
ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ನೋಟುಗಳ ಬದಲಾವಣೆ ಸಾಧ್ಯವಾಗದೇ ಇದ್ದ ಘಟನೆಗಳೂ ನಡೆದಿದ್ದು, ಹಲವೆಡೆ ಅನಾನುಕೂಲದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬಿಹಾರದ ಗೋಪಾಲ್ ಗಂಜ್ ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನಗದು ಖಾಲಿಯಾಗಿದ್ದು, ನೋಟುಗಳ ಬದಲಾವಣೆ ಸಾಧ್ಯವಾಗುವುದಿಲ್ಲ ಎಂದಿದ್ದಕ್ಕಾಗಿ ಆಕ್ರೋಶಗೊಂಡ ಜನತೆ ಗೇಟ್ ಗೆ ಹಾಕಲಾಗಿದ್ದ ಬೀಗವನ್ನು ಮುರಿದು ಒಳಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 
ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯದ ಔರಂಗಾಬಾದ್, ಮುಜಾಫರ್ ಪುರ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಡಿಕೆ ಶಿವಕುಮಾರ್ ಪತ್ರ!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video