ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ 
ದೇಶ

ಕಾಲಾವಕಾಶ ನೀಡಿದರೆ ಪ್ರತೀ ಖಾತೆಗೆ 15 ಲಕ್ಷ ಹಣ ಠೇವಣಿಯಾಗುತ್ತದೆಯೇ: ಪ್ರಧಾನಿ ಮೋದಿಗೆ ಲಾಲು ಪ್ರಶ್ನೆ!

50 ದಿನ ಪೂರ್ಣಗೊಂಡ ಬಳಿಕ ದೇಶದಲ್ಲಿರುವ ಪ್ರತೀಯೊಬ್ಬ ಪ್ರಜೆಯ ಖಾತೆಗೆ ರು.15 ಲಕ್ಷ ಹಣ ಠೇವಣಿಯಾಗುತ್ತದೆಯೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್...

ಪಾಟ್ನ: 50 ದಿನ ಪೂರ್ಣಗೊಂಡ ಬಳಿಕ ದೇಶದಲ್ಲಿರುವ ಪ್ರತೀಯೊಬ್ಬ ಪ್ರಜೆಯ ಖಾತೆಗೆ ರು.15 ಲಕ್ಷ ಹಣ ಠೇವಣಿಯಾಗುತ್ತದೆಯೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಸೋಮವಾರ ಪ್ರಶ್ನೆ ಹಾಕಿದ್ದಾರೆ.

ನಿನ್ನೆಯಷ್ಟೇ ಗೋವಾದಲ್ಲಿ ಮೋಪ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, 70 ವರ್ಷಗಳ ದೇಶವನ್ನು ಲೂಟಿ ಮಾಡಲಾಗಿದೆ, 70 ವರ್ಷಗಳ ಭ್ರಷ್ಟಚಾರವನ್ನು ಸ್ವಚ್ಛಗೊಳಿಸಲು 50 ದಿನವಾದರೂ ಬೇಡವೇ. ಕಪ್ಪುಹಣಕ್ಕೆ ಕಡಿವಾಣ ಹಾಕಲು ನನಗೆ 50 ದಿನಗಳ ಕಾಲಾವಕಾಶವನ್ನು ಕೊಡಿ ಎಂದು ಹೇಳಿದ್ದರು.

ಈ ಹೇಳಿಕೆಗೆ ಇಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಲಾಲೂ ಪ್ರಸಾದ್ ಯಾದವ್ ಅವರು, ಮೋದಿಯವರೇ ನೀವು ನಿಗದಿತ 50 ದಿನಗಳ ಸಮಯವನ್ನು ಕೇಳುತ್ತಿದ್ದೀರಿ. ಈ ಹಿಂದೆ ಚುನಾವಣೆ ವೇಳೆಯಲ್ಲಿ ಭರವಸೆಯನ್ನು ನೀಡಿದ್ದಿರಿ. ಚುನಾವಣೆಯಲ್ಲಿ ಗೆದ್ದರೆ, ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುತ್ತೇನೆ. ದೇಶದಲ್ಲಿರುವ ಪ್ರತೀಯೊಬ್ಬ ಪ್ರಜೆಯ ಖಾತೆಗೂ ರು.15 ಲಕ್ಷ ಹಣವನ್ನು ಠೇವಣಿ ಮಾಡುತ್ತೇನೆಂದು ಹೇಳಿದ್ದಿರಿ. ಇದೀಗ 50 ದಿನಗಳ ಕಾಲಾವಕಾಶವನ್ನು ಕೇಳುತ್ತಿದ್ದೀರಿ. 50 ದಿನ ಕಳೆದ ಬಳಿಕ ಪ್ರತೀಯೊಬ್ಬ ಪ್ರಜೆಯ ಖಾತೆಗೆ ರು.15 ಲಕ್ಷ ಠೇವಣಿಯಾಗುತ್ತದೆಯೇ?... ಒಂದು ವೇಳೆ 50 ದಿನಗಳ ಬಳಿಕ ದೇಶದ ಪ್ರಜೆಗಳ ಖಾತೆಗಳಿಗೆ ರು.15 ಲಕ್ಷ ಹಣ ಬರದಿದ್ದರೆ. ಇದನ್ನು ನಕಲಿ ಸೀಮಿತ ದಾಳಿ ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!