ನವದೆಹಲಿ: ದುಬಾರಿ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರಕ್ಕೆ ತಾಯಿ ಹೀರಾಬೆನ್ ಮೋದಿಯವರು ಬೆಂಬಲವನ್ನು ವ್ಯಕ್ತಪಡಿಸಿದ್ದು, ಜನರೊಂದಿಗೆ ಸಾಲಿನಲ್ಲಿ ನಿಂತು ಮಂಗಳವಾರ ಬ್ಯಾಂಕೊಂದರಲ್ಲಿ ನೋಟನ್ನು ಬದಲಾಯಿಸಿಕೊಂಡಿದ್ದಾರೆ.
ಗುಜರಾತ್ ನ ಗಾಂಧಿನಗರದಲ್ಲಿರುವ ಬ್ಯಾಂಕ್ ವೊಂದಕ್ಕೆ ಬಂದಿರುವ 93 ವರ್ಷದ ಹೀರಾಬೆನ್ ಅವರು ಜನರೊಂದಿಗೆ ಸಾಲಿನಲ್ಲಿ ನಿಂತು ನೋಟನ್ನು ಬದಲಾಯಿಸಿಕೊಂಡಿದ್ದಾರೆ. ಹಳೆಯ ನೋಟುಗಳನ್ನು ನೀಡಿ ರು. 4,500 ಹಣವನ್ನು ಪಡೆದುಕೊಂಡಿದ್ದಾರೆ.
ಇಂದು ಬೆಳಿಗ್ಗೆ ವ್ಹೀಲ್ ಚೇರ್ ನಲ್ಲಿ ಬಂದಿರುವ ಮೋದಿಯವರ ತಾಯಿ, ದಾಖಲೆಗಳಿಗೆ ಸಹಿ ಮಾಡಿ ಹಣವನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ಮೂಲಕ ಮೋದಿಯವರ ಹೆಜ್ಜೆಗೆ ಕುಟುಂಬಸ್ಥರು ಬೆಂಬಲವನ್ನು ಸೂಚಿಸಿದ್ದಾರೆ.