ಸಾಂದರ್ಭಿಕ ಚಿತ್ರ 
ದೇಶ

ಎಟಿಎಂಗೆ ಹಾಕಲು ನೀಡಿದ್ದ ಹೊಸ ನೋಟುಗಳೊಂದಿಗೆ ಬ್ಯಾಂಕರ್ ಪರಾರಿ!

ಎಟಿಎಂಗೆ ಹಾಕಲು ನೀಡಲಾಗಿದ್ದ ಸುಮಾರು 6.98 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ಬ್ಯಾಂಕರ್ ಓರ್ವ ಕದ್ದು ಪರಾರಿಯಾಗಿರುವ ಘಟನೆ ಪಂಜಾಬ್ ಮೊಹಾಲಿಯಲ್ಲಿ ನಡೆದಿದೆ.

ಮೊಹಾಲಿ: ಎಟಿಎಂಗೆ ಹಾಕಲು ನೀಡಲಾಗಿದ್ದ ಸುಮಾರು 6.98 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ಬ್ಯಾಂಕರ್ ಓರ್ವ ಕದ್ದು ಪರಾರಿಯಾಗಿರುವ ಘಟನೆ ಪಂಜಾಬ್ ಮೊಹಾಲಿಯಲ್ಲಿ ನಡೆದಿದೆ.

ದೇಶಾದ್ಯಂತ ಹೊಸ ನೋಟುಗಳಿಗೆ ಜನತೆ ಭವಣೆ ಪಡುತ್ತಿರುವಂತೆಯೇ ಇತ್ತ ಮೊಹಾಲಿಯಲ್ಲಿ ಬ್ಯಾಂಕ್ ನೌಕರನೋರ್ವ ಎಟಿಎಂಗೆ ತುಂಬಿಸಲು ನೀಡಲಾಗಿದ್ದ ಹಣದೊಂದಿಗೆ ಪರಾರಿಯಾಗಿದ್ದಾನೆ. ಪರಾರಿಯಾದ ಬ್ಯಾಂಕ್  ನೌಕರನನ್ನು ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ತೇಜ್ ಪ್ರತಾಪ್ ಸಿಂಗ್ ಭಾಟಿಯಾ ಎಂದು ಗುರುತಿಸಲಾಗಿದೆ. ಮೊಹಾಲಿ ಜಿಲ್ಲೆಯ ಡೆರಬಾಸ್ಸಿ ತಾಲ್ಲೂಕಿನ ಬಂಕಾರ್ಪುರ್ ಹಳ್ಳಿಯಲ್ಲಿ ಎಟಿಎಂಗೆ ಹಣ  ತುಂಬಿಸುವಂತೆ ನೀಡಲಾಗಿದ್ದ ಸುಮಾರು 6.98 ಲಕ್ಷ ಮೌಲ್ಯದ ಹಣವನ್ನು ತೇಜ್ ಪ್ರತಾಪ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಎಟಿಎಂಗೆ ಹಣ ತುಂಬಿಸುವ ಪ್ರಕ್ರಿಯೆ ವೇಳೆ ವೀಕ್ಷಣೆ ಮಾಡಲು ತೇಜ್ ಪ್ರತಾಪ್ ನನ್ನು ನೇಮಿಸಲಾಗಿತ್ತು. ಈ ವೇಳೆ ಓರ್ವ ಭದ್ರತಾ ಅಧಿಕಾರಿ, ಓರ್ವ ಇಂಜಿನಿಯರ್ ನೊಂದಿಗೆ ಎಟಿಎಂಗೆ ಆಗಮಿಸಿದ ತೇಜ್ ಪ್ರತಾಪ್  ಇಂಜಿನಿಯರ್ ಎಟಿಎಂ ತೆರೆಯುತ್ತಿರುವಾಗ ಭದ್ರತಾ ಸಿಬ್ಬಂದಿ ಆತನಿಗೆ ಸಹಾಯ ಮಾಡುತ್ತಿದ್ದ. ಇದನ್ನೇ ತನ್ನ ದುಷ್ಕ್ಕೃತ್ಯಕ್ಕೆ ಬಳಸಿಕೊಂಡ ತೇಜ್ ಪ್ರತಾಪ್ ಸಿಬ್ಬಂದಿಗಳು ಕೆಲಸದಲ್ಲಿ ಮಗ್ನರಾಗಿದ್ದಾಗ ಹಣದ ಬಾಕ್ಸ್ ನೊಂದಿಗೆ  ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಪ್ರಸ್ತುತ ಕಳ್ಳ ಬ್ಯಾಂಕರ್ ವಿರುದ್ಧ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಆಡಳಿತ ಮಂಡಳಿ ಡೆರಬಸ್ಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್