ದೇಶ

ಶೀನಾ ಬೋರಾ ಹತ್ಯೆ: ಪೀಟರ್ ಮುಖರ್ಜಿ ಜಾಮೀನು ಅರ್ಜಿ ವಜಾ

Vishwanath S
ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣ ಸಂಬಂಧ ಉದ್ಯಮಿ ಪೀಟರ್ ಮುಖರ್ಜಿ ಜಾಮೀನು ಅರ್ಜಿಯನ್ನು ಬಾಂಬೈ ಹೈಕೋರ್ಟ್ ವಜಾ ಮಾಡಿದೆ. 
ಪೀಟರ್ ಮುಖರ್ಜಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಡಬ್ಲೂ ಸಾಂಬ್ರೆ ಅವರು ಅರ್ಜಿ ವಜಾಗೊಳಿಸಿದ್ದ ಅರ್ಜಿ ವಜಾ ಮಾಡಿದ ಕಾರಣವನ್ನು ನಾಳೆ ತಿಳಿಸಲಿದ್ದಾರೆ. 
ಪೀಟರ್ ಮುಖರ್ಜಿ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಅವರ ಪತಿಯಾಗಿದ್ದಾರೆ. ಕಳೆದ ನವೆಂಬರ್ ನಲ್ಲಿ ಸಿಬಿಐ ಪೀಟರ್ ಮುಖರ್ಜಿಯನ್ನು ಬಂಧಿಸಿತ್ತು. 
ಪೀಟರ್ ಮುಖರ್ಜಿ ಸೆಷನ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾಗೊಂಡ ನಂತರ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. 
2012ರ ಏಪ್ರಿಲ್ ನಲ್ಲಿ ಕಣ್ಮರೆಯಾಗಿದ್ದ ಶೀನಾ ಬೋರಾಳ ಮೃತದೇಹ ಮುಂಬೈನ ರಾಯ್ ಗಢದ ಅರಣ್ಯದಲ್ಲಿ ಪತ್ತೆಯಾಗಿತ್ತು. ತಾಯಿ-ಮಗಳ ಮಧ್ಯೆ ಹಣಕಾಸಿನ ಭಿನ್ನಾಭಿಪ್ರಾಯದಿಂದ ಇಂದ್ರಾಣಿ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇಂದ್ರಾಣಿಯನ್ನು ಬಂಧಿಸಲಾಗಿದ್ದು ಸದ್ಯ ಜೈಲಿನಲ್ಲಿದ್ದಾರೆ. 
SCROLL FOR NEXT