ಬಿವಂಡಿಯಲ್ಲಿ ಕಟ್ಟಡ ಕುಸಿತ: ಓರ್ವ ಸಾವು
ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ರಸ್ತೆಯಲ್ಲಿ ಮಲಗಿದ್ದ ಭಿಕ್ಷುಕ ಸಾವನ್ನಪ್ಪಿರುವ ಘಟನೆ ಬಿವಂಡಿಯಲ್ಲಿ ನಡೆದಿದೆ....
ಥಾಣೆ: ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ರಸ್ತೆಯಲ್ಲಿ ಮಲಗಿದ್ದ ಭಿಕ್ಷುಕ ಸಾವನ್ನಪ್ಪಿರುವ ಘಟನೆ ಬಿವಂಡಿಯಲ್ಲಿ ನಡೆದಿದೆ.
ಮೊಹಮದ್ ಮೊಮಿನ್ ಮೃತ ವ್ಯಕ್ತಿ. ನಿಜಾಮ್ ಪುರದಲ್ಲಿದ್ದ ಸಮತಾ ಎಂಬ ಕಟ್ಟಡ ತೀರಾ ಹಳೆಯದಾಗಿ ಅಪಾಯದ ಅಂಚಿನಲ್ಲಿತ್ತು. ಹೀಗಾಗಿ ಆ ಕಟ್ಟಡದಲ್ಲಿದ್ದವರೆಲ್ಲಾ ಖಾಲಿ ಮಾಡಿದ್ದರು. ಮಧ್ಯರಾತ್ರಿ ಸುಮಾರು 1.30 ನಿಮಿಷಕ್ಕೆ ಕಟ್ಟಡ ಕುಸಿದಿದೆ.
ಕಟ್ಟಡದ ಪಕ್ಕದ ರಸ್ತೆಯಲ್ಲಿ ಮಲಗಿದ್ದ ಭಿಕ್ಷುಕ ಸಾವನ್ನಪ್ಪಿದ್ದಾನೆ ಎಂದು ಥಾಣೆ ಪೋಲೀಸರು ತಿಳಿಸಿದ್ದಾರೆ. ಪೊಲೀಸರು ಹಾಗೂ ಸ್ಥಳೀಯ ನಗರಸಭೆ ಸದಸ್ಯರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ, ಶವವನ್ನು ಹೊರತೆಗೆದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.