ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ವಿಶ್ವದ ಅತಿದೊಡ್ಡ 24/7 ತುರ್ತುಸೇವೆಗೆ ಲಕ್ನೋದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಿಂದ ಚಾಲನೆ

ವಿಶ್ವದ ಅತಿದೊಡ್ಡ 24/7 ತುರ್ತು ಸೇವೆಯನ್ನು ಭಾನುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ...

ಯುಪಿ-100 ವಿಶ್ವದ ಅತಿದೊಡ್ಡ 24/7 ತುರ್ತುಸೇವೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್
Lingaraj Badiger
Updated On : 20 Nov 2016, 4:01 am
ಲಕ್ನೋ: ವಿಶ್ವದ ಅತಿದೊಡ್ಡ 24/7 ತುರ್ತು ಸೇವೆಯನ್ನು ಭಾನುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉದ್ಘಾಟಿಸಿದರು. ಈ ಕುರಿತು ಸ್ವತಃ ಮುಖ್ಯಮಂತ್ರಿಯವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಅಖಿಲೇಶ್ ಯಾದವ್ ಅವರು ನಿನ್ನೆ ಲಕ್ನೋದಲ್ಲಿ ರಾಜ್ಯಾದ್ಯಂತ ಆಂತರಿಕ ತುರ್ತುಸೇವೆಗಳಿಗೆ ಚಾಲನೆ ನೀಡಿದ್ದರು.
ಯುಪಿ-100 ಉತ್ತರ ಪ್ರದೇಶ ಪೊಲೀಸ್ ತುರ್ತು ನಿರ್ವಹಣಾ ವ್ಯವಸ್ಥೆಯ ಅಧಿಕೃತ ಹೆಸರಾಗಿದ್ದು ಈ ಮುಂಚೆ ಅದನ್ನು ಡಯಲ್ 100 ಯೋಜನೆ ಎಂದು ಕರೆಯಲಾಗಿತ್ತು.
ಈ ಹೊಸ ಅತ್ಯಾಧುನಿಕ ಕೇಂದ್ರೀಕೃತ ತುರ್ತು ವ್ಯವಸ್ಥೆಯಡಿ ಯಾರಾದರೂ ತುರ್ತು ಸೇವೆಗೆ ಕರೆ ಮಾಡಿದರೆ ಪೊಲೀಸರು ಅತ್ಯಂತ ಕುಗ್ರಾಮ ಪ್ರದೇಶಗಳಿಗೂ ಸಹ 20 ನಿಮಿಷಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿ 15 ನಿಮಿಷಗಳಲ್ಲಿ ತಲುಪುತ್ತಾರೆ.

Advertisement

Advertisement

ಉತ್ತರ ಪ್ರದೇಶ ರಾಜ್ಯಾದ್ಯಂತ ಸಾರ್ವಜನಿಕರ ಸುರಕ್ಷತೆಗೆ ಹಗಲು-ರಾತ್ರಿಯೆನ್ನದೆ ಯಾವಾಗಲೂ ತುರ್ತು ಸೇವೆ ಒದಗಿಸಲು ಯುಪಿ-100 ಸೇವೆಯನ್ನು ಒದಗಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement