ನವದೆಹಲಿ: ಉನ್ನತಮಟ್ಟದ ಸೇನಾ ನಿಯೋಗದೊಂದಿಗೆ ಚೀನಾಗೆ ತೆರಳಿರುವ ದಲ್ಬೀರ್ ಸಿಂಗ್ ಸುಹಾಗ್, ಪರಸ್ಪರ ಕಾಳಜಿ, ಉಭಯ ರಾಷ್ಟ್ರಗಳ ಹಿತಾಸಕ್ತಿ, ಭಯೋತ್ಪಾದನೆ, ಶಾಂತಿಪಾಲನಾ ತರಬೇತಿ ಸೇರಿದಂತೆ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಪೀಪಲ್ಸ್ ಲಿಬರೇಷನ್ ಆರ್ಮಿಯ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ.
ರಕ್ಷಣಾ ಸಹಕಾರದ ವಿಚಾರದಲ್ಲಿ ಪಿಎಲ್ಎ( ಪೀಪಲ್ಸ್ ಲಿಬರೇಷನ್ ಆರ್ಮಿ)ಯನ್ನು ತೊಡಗಿಸಿಕೊಳ್ಳುವುದಕ್ಕೆ ಇದೊಂದು ಉತ್ತಮವಾದ ಅವಕಾಶವಾಗಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸೇನಾ ಮುಖ್ಯಸ್ಥರೊಂದಿಗೆ ತೆರಳಿರುವ ನಿಯೋಗ ಪಿಎಲ್ಎ ಹಾಗೂ ಸಿಎಂಸಿ ಕೇಂದ್ರ ಮಿಲಿಟರಿ ಆಯೋಗದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.