ಮುಂಬೈ: ಪದೇ ಪದೇ ತನ್ನ ನೀಚ ಬುದ್ಧಿ ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ಜೀವನ ಪರ್ಯಾಂತ ನೆನೆಯುವಂತೆ ದಿಟ್ಟ ಉತ್ತರ ನೀಡುತ್ತೇವೆಂದು ಬಿಜೆಪಿ ಬುಧವಾರ ಹೇಳಿದೆ.
ಗಡಿಯಲ್ಲಿ ಎಡೆಬಿಡದೆ ತನ್ನ ಪುಂಡಾಟವನ್ನು ಮುಂದುವರೆಸುತ್ತಲೇ ಇರುವ ಪಾಕಿಸ್ತಾನ ನಿನ್ನೆ ಮೂವರು ಭಾರತೀಯರನ್ನು ಹತ್ಯೆ ಮಾಡಿತ್ತು. ಮೂವರಲ್ಲಿ ಓರ್ವ ಯೋಧನ ಶಿರಚ್ಥೇದವನ್ನು ಮಾಡಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸದಸ್ಯೆ ಶೈನಾ ಎನ್.ಸಿ ಅವರು, ಯೋಧರ ಹತ್ಯೆಯಿಂದಾಗಿ ದೇಶದ ಜನತೆಗೆ ಸಾಕಷ್ಟು ನೋವಾಗಿದೆ. ಯೋಧನ ಶಿರಚ್ಛೇದ ಮಾಡುವ ಮೂಲಕ ಪಾಕಿಸ್ತಾನ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿದೆ. ಯಾವುದೇ ಕಾರಣಕ್ಕೂ ನಾವು ಭಾರತ ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಈ ವರ್ತನೆಗೆ ಮೋದಿ ಸರ್ಕಾರ ದಿಟ್ಟ ಉತ್ತರವನ್ನು ನೀಡಲಿದೆ. ಜೀವನ ಪರ್ಯಾಂತ ಈ ಉತ್ತರವನ್ನು ಪಾಕಿಸ್ತಾನ ನೆನೆಯುವಂತೆ ಮಾಡಲಿದೆ ಎಂದು ತಿಳಿಸಿದ್ದಾರೆ.