ಕೆ ಚಂದ್ರಶೇಖರ್ ಮನೆ ಗೃಹ ಪ್ರವೇಶ 
ದೇಶ

ಬುಲೆಟ್ ಪ್ರೂಫ್ ಬಂಗಲೆ ಗೃಹ ಪ್ರವೇಶ ಮಾಡಿದ ತೆಲಂಗಾಣ ಸಿಎಂ ಕೆಸಿಆರ್

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಭವ್ಯ ಬಂಗಲೆಯ ಗೃಹಪ್ರವೇಶ ನೆರವೇರಿದೆ. ಹೈದ್ರಾಬಾದ್‍ನ ಬೇಗಮ್ ಪೇಟ್‍ನಲ್ಲಿ ನಿರ್ಮಿಸಿರುವ ಮನೆಯ...

ಹೈದರಾಬಾದ್: ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಭವ್ಯ ಬಂಗಲೆಯ ಗೃಹಪ್ರವೇಶ ನೆರವೇರಿದೆ.ಹೈದ್ರಾಬಾದ್‍ನ ಬೇಗಮ್ ಪೇಟ್‍ನಲ್ಲಿ ನಿರ್ಮಿಸಿರುವ ಮನೆಯ ಗೃಹ ಪ್ರವೇಶ ನೆರವೇರಿದೆ

ಭಾರತದ ಮುಖ್ಯಮಂತ್ರಿಗಳ ಮನೆಗಳಲ್ಲೇ ಅತಿ ವಿಶಾಲವಾದ ಹಾಗೂ ಅತಿ ವೆಚ್ಚದ ಮನೆ ಇದಾಗಿದೆ ಎಂದು ಹೇಳಲಾಗಿದೆ.

ಇಂದು ಬೆಳಗಿನ ಜಾವ 5 ಗಂಟೆ 22 ನಿಮಿಷಕ್ಕೆ  ಬ್ರಾಹ್ಮೀ ಮೂಹೂರ್ತದಲ್ಲಿ ಗೃಹ ಪ್ರವೇಶ ನೆರವೇರಿದೆ. ಚಂದ್ರ ಶೇಕರ್ ರಾವ್ ಹಾಗೂ ಪತ್ನಿ ಶೋಭಾ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು.

ಮೊದಲಿಗೆ ದೈವ ಪ್ರವೇಶ, ಯತಿ ಪ್ರವೇಶ, ಗೋ ಪ್ರವೇಶ ದ ನಂತರ ದಂಪತಿ ಗೃಹ ಪ್ರವೇಶ ನೆರವೇರಿಸಿದರು.ವಾಸ್ತು ಶಾಸ್ತ್ರದಲ್ಲಿ ಅತೀವ ನಂಬಿಕೆಯಿಟ್ಟಿರುವ ಚಂದ್ರಶೇಖರ್ ರಾವ್ ವಾಸ್ತು ಪೂಜೆ, ಸುದರ್ಶನ ಯಾಗ ಪೂರ್ಣಾಹುತಿ ನೆರವೇರಿಸಿದ್ದಾರೆ.

ಮನೆಯ ಎಲ್ಲಾ ಕಿಟಕಿಗಳು ಬುಲೆಟ್ ಪ್ರೂಫ್ ಆಗಿವೆ, 9 ಎಕರೆಯಲ್ಲಿ ನಿರ್ಮಾಣವಾಗಿರುವ ಈ ಬುಲೆಟ್ ಪ್ರೂಫ್ ಬಂಗಲೆಗೆ ಪ್ರಗತಿ ಭವನ್ ಎಂದು ಹೆಸರಿಡಲಾಗಿದೆ.ಮನೆಯಲ್ಲಿ 250 ಜನ ಕೂರಬಹುದಾದಂತಹ ಥಿಯೇಟರ್, ದೊಡ್ಡ ಕಾನ್ಫರೆನ್ಸ್ ಹಾಲ್, ಹಾಗೂ ಹಿರಿಯ ಅಧಿಕಾರಿಗಳಿಗಾಗಿ ಕೊಠಡಿಗಳಿವೆ. ಅಲ್ಲದೆ ಮನೆಯಲ್ಲಿ ಬಾತ್‍ರೂಮ್ ಸೇರಿದಂತೆ ಇಡೀ ಮನೆಗೆ ಬುಲೆಟ್ ಪ್ರೂಫ್ ಗಾಜು ಹಾಕಿಸಲಾಗಿದೆ.

ಆಂಧ್ರ ಪ್ರದೇಶ ರಾಜ್ಯಪಾಲ, ನರಸಿಂಹನ್ ಸೇರಿದಂತೆ ತೆಲಂಗಾಣ ಸಚಿವರುಸ ಶಾಸಕರು ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೀಟ್​ ವೇವ್​ ಅಬ್ಬರ: ಇಡೀ ದೇಶವನ್ನೇ ಸುಡುತ್ತಿದೆ ಬೆಂಕಿ ಬಿಸಿಲು; ಜಗತ್ತಿನ 100 ಹಾಟ್ ನಗರಗಳ ಪೈಕಿ ಭಾರತದಲ್ಲೇ 98!

ಟ್ರಂಪ್ ಆಡಳಿತದಲ್ಲಿ ಮತ್ತೊಂದು ವಿಕೆಟ್ ಪತನ?: FBI ಮುಖ್ಯಸ್ಥ ಕಾಶ್ ಪಟೇಲ್ ವಜಾ ಸಾಧ್ಯತೆ

IPL 2026: RCBಗೆ ದೊಡ್ಡ ಆಘಾತ; ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಫಿಲ್ ಸಾಲ್ಟ್​ ಅಲಭ್ಯ

ಹರ್ಭಜನ್ ಸಿಂಗ್‌ಗೆ ಸಂಕಷ್ಟ: ಭದ್ರತೆ ಹಿಂಪಡೆದ ಪಂಜಾಬ್ ಸರ್ಕಾರ, ಕೇಂದ್ರದಿಂದ CRPF ಭದ್ರತೆ ನಿಯೋಜನೆ!

IPL 2026: ಚೆನ್ನೈಗೆ ಮತ್ತೊಂದು ಸೋಲು, 8 ವಿಕೆಟ್ ಗಳಿಂದ GT ಗೆ ಸುಲಭ ಜಯ!

SCROLL FOR NEXT